ಜಮ್ಮು, ಫೆ 24 (DaijiworldNews/SM): ರಣಜಿಟ್ರೋಫಿ ಸರಣಿಯಲ್ಲಿ ಕರ್ನಾಟಕ ತಂಡ ಗೆಲುವಿನ ನಾಗಲೋಟ ಮುಂದುವರೆಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡವನ್ನು ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಜಮ್ಮು ಕಾಶ್ಮೀರ ತಂಡವನ್ನು 167 ರನ್ ಗಳ ಅಂತರದಲ್ಲಿ ಮಣಿಸಿದ ಕರ್ನಾಟಕದ ಹುಡುಗರು ಸೆಮಿ ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ. ಜಮ್ಮು ಮೈದಾನದಲ್ಲಿ ಮುಕ್ತಾಯಗೊಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 167ರನ್ ಗಳ ಅಂತರದಿಂದ ಗೆಲುವು ದಾಖಲಿಸಿಕೊಂಡಿದೆ.
ಇನ್ನು ಕರ್ನಾಟಕ ನೀಡಿದ್ದ 331 ರನ್ ಗಳ ಬೃಹತ್ ಸವಾಲನ್ನು ಬೆನ್ನಟ್ಟಿದ ಜಮ್ಮು ಹುಡುಗರು ಕನ್ನಡಿಗರ ಮಾರಕ ದಾಳಿಗೆ ತತ್ತರಿಸಿದರು. ಅಂತಿಮವಾಗಿ ಕೇವಲ 164ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಕರ್ನಾಟಕಕ್ಕೆ ಶರಣಾದರು. ಕರ್ನಾಟಕದ ಪರ ಗೌತಮ್ ಬರೊಬ್ಬರಿ 7 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖರೆನಿಸಿಕೊಂಡರು.
ಇನ್ನು ಸೆಮಿ ಫೈನಲ್ ನಲ್ಲಿ ಕರ್ನಾಟಕ ಪ್ರಬಲ ಬಂಗಾಳ ತಂಡವನ್ನು ಎದುರಿಸಲಿದೆ.