ಹ್ಯಾಮಿಲ್ಟನ್, ಫೆ.16 (DaijiworldNews/PY): ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಶಮಿ ಅತ್ಯುತ್ತಮ ಬೌಲಿಂಗ್ ಮಾಡಿ ಎರಡನೇ ದಿನದಾಟದಲ್ಲಿ ಮಿಂಚಿದ್ದಾರೆ.
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ74.4 ಓವರ್ಗಳಲ್ಲಿ 235 ರನ್ಗೆ ಆಲೌಟ್ ಆಗಿದ್ದು, ಬುಮ್ರಾ(11 ಓವರ್ಗಳಲ್ಲಿ 2-18) ಹಾಗೂ ಶಮಿ(10 ಓವರ್ಗಳಲ್ಲಿ 3-17) ಆಡಿದ್ದಾರೆ. ಉಮೇಶ್ ಯಾದವ್(13 ಓವರ್ಗಳಲ್ಲಿ 2-49) ಹಾಗೂ ದೀಪಕ್ ಸೈನಿ (15 ಓವರ್ಗಳಲ್ಲಿ 2-58) ಅಧಿಕ ಓವರ್ಗಳ ಬೌಲಿಂಗ್ ಮಾಡಿದ್ದಾರೆ. ಶಮಿ ಹಾಗೂ ಬುಮ್ರಾ ತಮ್ಮ ಸ್ಪೆಲ್ಗಳ ಮೂಲಕ ಎದುರಾಳಿ ಬ್ರಾಟ್ಸ್ಮನ್ಗೆ ಸವಾಲೊಡ್ಡಿದ್ದು, ನ್ಯೂಜಿಲ್ಯಾಂಡ್ ಪರ ಹೆನ್ರಿ ಕೂಪರ್ ಸರ್ವಾಧಿಕ ಸ್ಕೋರ್(70, 68 ಎಸೆತ) ಗಳಿಸಿದರು. ರವೀಂದ್ರ(34), ನಾಯಕ ಮಿಚೇಲ್(32) ಹಾಗೂ ಬ್ರೂಸ್(31) ಅಂಕ ಗಳಿಸಿದ್ದಾರೆ.
ಫೃಥ್ವಿ ಶಾ(25 ಎಸೆತ,ಔಟಾಗದೆ 35), ಹಾಗೂ ಮಯಾಂಕ್ ಅಗರ್ವಾಲ್(17 ಎಸೆತ, ಔಟಾಗದೆ 23) ಅಂಕ ಪಡೆದಿದ್ದಾರೆ. ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೇ 53 ರನ್ ಕಲೆಹಾಕಿದೆ.