ಹ್ಯಾಮಿಲ್ಟನ್, ಫೆ 13 (DaijiworldNews/SM): ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈ ಚೆಲ್ಲಿದೆ. ಇದೀಗ ಟೆಸ್ಟ್ ಸರಣಿಗೆ ಉಭಯ ತಂಡಗಳು ರೆಡಿಯಾಗಿವೆ. ಟೆಸ್ಟ್ ಪಂದ್ಯಕ್ಕಾಗಿ ಟಿಂ ಇಂಡಿಯಾವನ್ನು ಸಜ್ಜುಗೊಳಿಸಲಾಗುತ್ತಿದೆ. ಈ ನಡುವೆ ತಂಡದಲ್ಲಿ ಒಂದಿಷ್ಟು ಬದಲಾವಣೆ ನಡೆಸಬೇಕಾಗಿದೆ ಎಂದು ಹಿರಿಯ ಆಟಗಾರರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಎ ಸರಣಿಯಲ್ಲಿ ಶುಭನಮ್ ಗಿಲ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರನ್ನು ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿಗೆ ಆಯ್ಕೆಗೊಳಿಸುವಂತೆ ಹಿರಿಯ ಸ್ಪಿನರ್ ಹರ್ಭಜನ್ ಸಿಂಗ್ ತಿಳಿಸಿದ್ದಾರೆ. ಟೆಸ್ಟ್ ಸರಣಿಗೆ ಪೃಥ್ವಿ ಶಾ ಬದಲಿಗೆ ಗಿಲ್ ಗೆ ಅವಕಾಶ ನೀಡಿ ಎಂದು ಅವರು ತಿಳಿಸಿದ್ದಾರೆ.
ಭಾರತ ಎ ಪರ ಶುಭಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 83 ಮತ್ತು ಆರಂಭಿಕರಾಗಿ 204 ರನ್ ಬಾರಿಸಿದ್ದು ಅವರು ಯಾವುದೇ ಕ್ರಮಾಂಕದಲ್ಲೂ ಪರಿಪೂರ್ಣ ಬ್ಯಾಟಿಂಗ್ ಮಾಡಬಲ್ಲರು ಎಂಬುವುದನ್ನು ಸ್ಪಷ್ಟಗೊಳಿಸಿದ್ದಾರೆ. ಆ ಮೂಲಕ ಟೆಸ್ಟ್ ಪಂದ್ಯಕ್ಕೆ ತಾನು ಫಿಟ್ ಎಂಬುವುದನ್ನು ಅವರು ಪ್ರಸ್ತುತಪಡಿಸಿದ್ದಾರೆ ಎಂದಿದ್ದಾರೆ ಹರ್ಭಜನ್.
ಇನ್ನು 16 ತಿಂಗಳ ನಂತರ ಪೃಥ್ವಿ ಶಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಶಾ ಸಹ ಆಡುವ ಹನ್ನೊಂದಕ್ಕೆ ಕಠಿಣ ಸ್ಫರ್ಧಿಯಾಗಿದ್ದಾರೆ. ಇನ್ನು ಗಿಲ್ ರಾಜ್ಯ ತಂಡದ ನಾಯಕ ಸಹ ಆಗಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.