ಮೌಂಟ್ಮೌಂಗಾನುಯಿ, ಫೆ 10 (DaijiworldNews/SM): ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿ ಸರಣಿ ಕೈ ಚೆಲ್ಲಿರುವ ಭಾರತ ಇದೀಗ ವೈಟ್ ವಾಶ್ ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಡುತ್ತಿದೆ.
ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳುವುದು ಭಾರತಕ್ಕೆ ಅನಿವಾರ್ಯವೆನಿಸಿದೆ.
ಹ್ಯಾಮಿಲ್ಟನ್ನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ 347 ರನ್ ಗಳಿಸಿದ್ದರೂ, ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಭಾರತ ವಿಫಲವಾಗಿತ್ತು. ಆಕ್ಲೆಂಡ್ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳು ವಿಫಲರಾಗಿದ್ದರಿಂದ ಸೋಲಿಗೆ ಶರಣಾಗುವುದು ಅನಿವಾರ್ಯವಾಗಿತ್ತು. ಇದೀಗ ಮಂಗಳವಾರ ನಡೆಯಲಿರುವ ಮೂರನೇ ಪಂದ್ಯ ಗೆಲ್ಲುವುದು ಭಾರತಕ್ಕೆ ಅನಿವಾರ್ಯವೆನಿಸಿದೆ.
ಇದಕ್ಕಾಗಿ ಟೀಂ ಇಂಡಿಯಾ ಆಟಗಾರರು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಪರಿಶ್ರಮಪಟ್ಟು ಬ್ಯಾಟಿಂಗ್, ಫಿಲ್ಟಿಂಗ್ ಹಾಗೂ ಬೌಲಿಂಗ್ ನಲ್ಲಿ ಪಾರಮ್ಯ ಮೆರೆದಲ್ಲಿ ಅಂತಿಮ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಳ್ಳಬಹುದಾಗಿದೆ. ಇನ್ನೊಂದೆಡೆ ನ್ಯೂಜಿಲ್ಯಾಂಡ್ ಟಿ-20 ಸರಣಿಯ ಸೇಡನ್ನು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂಟಿದ್ದು, ಮಂಗಳವಾರದ ಪಂದ್ಯ ಗೆಲ್ಲಲೇ ಬೇಕೆನ್ನುವ ತವಕದಲ್ಲಿದೆ.