ನವದೆಹಲಿ, (DaijiworldNews/SM): ಪಾಕ್ ಹಾಗೂ ಭಾರತ ನಡುವಿನ ಪಂದ್ಯ ಎಂದಾಕ್ಷಣ ಅಭಿಮಾನಿಗಳು ಜೊತೆಯಾಗುತ್ತಾರೆ. ಪಾಕ್ ವಿರುದ್ಧ ಸಾಧನೆ ಮಾಡಿದ್ರೆ ಅಭಿಮಾನಿಗಳು ಹೆಚ್ಚೆದ್ದು ಕುಣಿಯುತ್ತಾರೆ. ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯವರ ಪಾಕ್ ವಿರುದ್ಧ ಸಾಧಿಸಿದ ಸಾಧನೆಯೊಂದು ಇದೀಗ 21 ವರ್ಷವನ್ನು ಪೂರೈಸಿದೆ.
ಹೌದು ಭಾರತದ ಮಾಜಿ ಆಟಗಾರ, ಮಾಜಿ ಸ್ಪಿನ್ನರ್ ಹಾಗೂ ಟೀಮ್ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಗಳನ್ನು ಉರುಳಿಸಿ ಮಹತ್ವದ ಸಾಧನೆ ಮಾಡಿದ್ದರು. ಇದನ್ನು ಭಾರತೀಯರು ಎಂದಿಗೂ ಮರೆಯಲಾರರು. ಈ ಸಾಧನೆಗೆ ಇದೀಗ ಇಪ್ಪತ್ತೊಂದು ವರ್ಷಗಳಾಗಿವೆ. ಕನ್ನಡಿಗ ಹಾಗೂ ಸ್ಪಿನ್ ದಿಗ್ಗಜನ ಈ ಸಾಧನೆಗೆ ಇದೀಗ 21 ವಸಂತಗಳನ್ನು ಪೂರೈಸಿದ್ದು, ಅಭಿಮಾನಿಗಳು ಇದನ್ನು ನೆನಪಿಸಿಕೊಂಡಿದ್ದಾರೆ.
1999ರ ಫೆ 7 ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಪಡೆದು ಸಂಭ್ರಮಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿದ್ದರು. ಇದಕ್ಕೂ ಮುನ್ನ ಜಿಕ್ ಲ್ಯಾಕರ್ ಹತ್ತು ವಿಕೆಟ್ ಗಳನ್ನು ಉರುಳಿಸಿದ್ದರು.