ಹ್ಯಾಮಿಲ್ಟನ್, ಫೆ 06 (Daijiworld News/MB) : ಹ್ಯಾಮಿಲ್ಟನ್ನಲ್ಲಿ ಬುಧವಾರ ನ್ಯೂಜಿಲ್ಯಾಂಡ್ ವಿರುದ್ಧವಾಗಿ ನಡೆದ ಮೊದಲಿ ಏಕದಿನ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿದ್ದು ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇ ಬೇಕಾಗಿದೆ.
ಭಾರತ ಮೊದಲ ಮಾಡಿದ್ದು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ತನ್ನ ಚೊಚ್ಚಲ ಶತಕ ಬಾರಿಸಿದ್ದು ಕೆಎಲ್ ರಾಹುಲ್ ಅರ್ಧಶತಕ ಬಾರಿಸಿದ್ದಾರೆ. ಈ ರನ್ಗಳ ನೆರವಿನಿಂದ ಭಾರತವೂ ನಾಲ್ಕು ವಿಕೆಟ್ ನಷ್ಟಕ್ಕೆ 347 ರನ್ಗಳ ಬೃಹತ್ ಮೊತ್ತ ಪಡೆದಿತ್ತು. ಆದರೆ ಆ ಬಳಿಕ ನ್ಯೂಜಿಲ್ಯಾಂಡ್ ತಂಡದ ರಾಸ್ ಟೇಲರ್ 109 ರನ್ನ್ನು ತಂಡಕ್ಕೆ ನೀಡಿದ್ದು ಇನ್ನುಳಿದಂತೆ ಟಾಮ್ ಲತಮ್ 69 ರನ್ ಗಳಿಸಿದರು. ಅಂತಿಮವಾಗಿ 48.1 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ ನ್ಯೂಜಿಲ್ಯಾಂಡ್ ತಂಡ 348 ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು.
ತನ್ನ ಚೊಚ್ಚಲ ಏಕದಿನ ಶತಕವನ್ನು ಬಾರಿಸಿ ಶ್ರೇಯಸ್ ಅಯ್ಯರ್ ಕಿವೀಸ್ ನೆಲದಲ್ಲಿ ಮಿಂಚಿದ್ದಾರೆ. "ಶತಕ ಬಾರಿಸಿದ್ದರೂ ಭಾರತ ತಂಡಕ್ಕೆ ಸೋಲಾಗಿರುವುದು ಬೇಸರ ತಂದಿದೆ "ಎಂದು ಅವರು ಹೇಳಿದ್ದಾರೆ.
ಈ ಶತಕ ಕಳೆದ ನಾಲ್ಕು ವರ್ಷಗಳಲ್ಲೇ ಏಕದಿನದಲ್ಲಿ ನಂ.4 ಕ್ರಮಾಂಕದಲ್ಲಿ ಭಾರತೀಯ ಬ್ಯಾಟ್ಸ್ಮನ್ನಿಂದ ವಿದೇಶದ ನೆಲದಲ್ಲಿ ದಾಖಲಾದ ಮೊದಲ ಶತಕವಾಗಿದೆ. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದ 2016ರಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ಪಾನೀಶ್ ಪಾಂಡೆ ನಾಲ್ಕನೇ ಕ್ರಮಾಂಕದಲ್ಲಿ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ್ದರು.
ಆದಾದ ಬಳಿಕ ಅನೇಕ ಆಟಗಾರರನ್ನು ನಾಲ್ಕನೇ ಕ್ರಮಾಂಕದಲ್ಲಿ ಶತಕ ಭಾರಿಸುವ ಪ್ರಯತ್ನ ಮಾಡಿದ್ದು ಈಗ ದೀರ್ಘ ಸಮಯದ ನಂತರ ನಂ.4 ಕ್ರಮಾಂಕದಲ್ಲಿ ಭಾರತೀಯ ಬ್ಯಾಟ್ಸ್ಮನ್ನಿಂದ ವಿದೇಶ ನೆಲದಲ್ಲಿ ಶತಕ ದಾಖಲಾಗಿದೆ.
2017ನೇ ಇಸವಿಯಲ್ಲಿ ಕಟಕ್ ಪಂದ್ಯದಲ್ಲಿ ಯುವರಾಜ್ ಸಿಂಗ್ (150) ಮತ್ತು 2018 ಮುಂಬಯಿ ಪಂದ್ಯದಲ್ಲಿ ಅಂಬಟಿ ರಾಯುಡು (100) ಕೂಡಾ ಶತಕ ಬಾರಿಸಿದ್ದಾರೆ. ಆದರೆ ಇವೆರಡು ಕೂಡಾ ಭಾರತದಲ್ಲೇ ದಾಖಲಾಗಿದೆ.
ಈ ಬಗ್ಗೆ ಅಯ್ಯರ್ ಮಾತನಾಡಿ, "ಭಾರತ ಎ ತಂಡದ ಪರ 2ರಿಂದ 5ರ ವರೆಗಿನ ಕ್ರಮಾಂಕಗಳಲ್ಲಿ ಬ್ಯಾಂಟಿಗ್ ಮಾಡಿರುವುದು ಈಗ ನರೆವಾಗಿದೆ, ಪತ್ರಿ ಬಾರಿಯೂ ನಾನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂಬುದಿಲ್ಲ, ಪರಿಸ್ಥಿತಿಗೆ ಅನುಗುಣವಾಗಿ ನನ್ನ ಕ್ರಮಾಂಕವನ್ನು ಬದಲಾವಣೆ ಮಾಡುತ್ತೇನೆ, ಆ ನಿಟ್ಟಿನಲ್ಲಿ ನನಗೆ ಭಾರತ ಎ ತಂಡದಲ್ಲಿ ಆಡಿರುವುದು ನೆರವು ನೀಡಿದೆ. ಭಾರತ ಎ ತಂಡದ ಪಂದ್ಯಗಳು ನನಗೆ ವೈಯಕ್ತಿಕವಾಗಿಯೂ ನೆರವಾಗಿದೆ, ಅಲ್ಲದೇ ನನಗೆ ಓರ್ವ ಆಟಗಾರನಾಗಿ ಯಾವುದೇ ಒತ್ತಡವಿರಲಿಲ್ಲ ಎಂದು ತಿಳಿಸಿದ್ದಾರೆ.
"ನನಗೆ ಶತಕ ದೊರೆತಿರುವುದರ ಬಗ್ಗೆ ಸತಂಸ ಉಂಟಾಗಿದೆ, ಆದರೆ ತಂಡ ಗೆಲುವು ಸಾಧಿಸಿದ್ದರೆ ಬಹಳ ಸಂತಸವಾಗುತ್ತಿತ್ತು. ಮುಂದೆ ನಾನು ಬಾರಿಸಲಿರುವ ಹಲವು ಶತಕಗಳಲ್ಲಿ ಇದು ಒಂದಾಗಲಿದೆ ಎಂದು ನಾನು ಭಾವಿಸಿದ್ದೇನೆ, ಹಾಗೆಯೇ ಮುಂದಿನ ಬಾರಿ ನಾನು ಶತಕ ಬಾರಿಸಿದಾಗ ತಂಡಕ್ಕೆ ಜಯ ಲಭಿಸಲಿದೆ ಎಂದು ನನ್ನ ಆಶಯ" ಎಂದರು.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆ ಆಡುವ ಕುರಿತಾಗಿ ಮಾತನಾಡಿದ ಅಯ್ಯರ್ ಅವರು, ಚೆಂಡು ನಿಧಾನವಾಗಿ ಬರುತ್ತಿತ್ತು. ಈ ಸಂದರ್ಭದಲ್ಲಿ ಜೊತೆಯಾಟಕ್ಕೆ ಗಮನ ನೀಡಿದೆವು. ನನ್ನ ಇನ್ನಿಂಗ್ಸ್ ಪ್ಲ್ಯಾನ್ ಮಾಡಿರುವ ಬಗ್ಗೆ ಸಂತಸವಿದೆ. ತಾಳ್ಮೆಯಿಂದ ಆಟವಾಡಿದೆ" ಎಂದು ಹೇಳಿದ್ದಾರೆ
"ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ಬ್ಯಾಟಿಂಗ್ಗೆ ಹೆಚ್ಚು ನೆರವಾಗುತ್ತಿತ್ತು. ಚೆಂಡು ಚೆನ್ನಾಗಿ ಬ್ಯಾಟ್ಗೆ ಬರುತ್ತಿದ್ದವು. ಮಂಜು ಕೂಡಾ ನಿರ್ಣಾಯಕ ಘಟಕವೆನಿಸಿತ್ತು. ಕಿವೀಸ್ ದಾಂಡಿಗರು ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಶ್ರೇಯಸ್ಸು ಅವರಿಗೆ ಸಲ್ಲಬೇಕು. 348 ರನ್ ಚೇಸ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಎದುರಾಳಿಗಳು ಇನ್ನಿಂಗ್ಸ್ ಪ್ಲ್ಯಾನ್ ಮಾಡಿದ ರೀತಿ ನೋಡಿದರೆ ಓರ್ವ ಬ್ಯಾಟ್ಸ್ಮನ್ ಆ್ಯಂಕರ್ ಮಾಡಿದರು. ಉಳಿದವರು ಕ್ಯಾಮಿಯೊ ಇನ್ನಿಂಗ್ಸ್ ಕಟ್ಟಿದರು. ಅವರ ಪಾಲಿಗಿದು ಉತ್ತಮ ಗೆಲುವಾಗಿದೆ" ಎಂದರು.
ಕೆಎಲ್ ರಾಹುಲ್ ಆಟದ ಬಗ್ಗೆ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಸಹ ಆಟಗಾರನಿಂದ ಸಾಕಷ್ಟು ಕಲಿಯಲಿಕ್ಕಿದೆ ಎಂದು ಹೇಳಿದರು.