ನ್ಯೂಜಿಲ್ಯಾಂಡ್, ಫೆ 2 (DaijiworldNews/SM): ನ್ಯೂಜಿಲ್ಯಾಂಡ್ ವಿರುದ್ಧದ ಐದು ಟಿ-20 ಪಂದ್ಯಗಳ ಸರಣಿಯನ್ನು ಭಾರತ ವೈಟ್ ವಾಶ್ ಮಾಡಿಕೊಂಡಿದೆ. ೫ನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಭಾರತದ ಪರ ಕೆ.ಎಲ್. ರಾಹುಲ್ 45 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ 60 ರನ್ ಸಿಡಿಸಿದ್ದ ಸಂದರ್ಭ ಗಾಯಗೊಂಡು ಅಂಗಣದಿಂದ ಹೊರ ನಡೆದರು. ಬಳಿಕ ಶ್ರೇಯಸ್ ಐಯರ್ ಔಟಾಗದೆ 33 ರನ್ ಸಿಡಿಸಿದರು.
ಇನ್ನು ಭಾರತ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲೇ ವೈಫಲ್ಯ ಅನುಭವಿಸಿತು. ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ 2 ಹಾಗೂ ಕಾಲಿನ್ ಮನ್ರೊ 15 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ಸೆಫರ್ಟ್ 50 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು. ಇನ್ನು ಟೇಲರ್ ಕೂಡ 53 ರನ್ ಗಳ ಕೊಡುಗೆ ನೀಡಿದರು.
ಅಂತಿಮವಾಗಿ 20 ಓವರ್ ಗಳಲ್ಲಿ ನ್ಯೂಜಿಲ್ಯಾಂಡ್ ತಂಡ 9 ವಿಕೆಟ್ ಗಳ ನಷ್ಟಕ್ಕೆ 156 ರನ್ ಗಳನ್ನು ಗಳಿಸಿ 7 ರನ್ ಗಳಿಂದ ಸೋಲೊಪ್ಪಿಕೊಂಡಿತು.