ಆಕ್ಲೆಂಡ್, ಜ 23 (DaijiworldNews/SM): ಇಡನ್ ಪಾರ್ಕ್ ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡವನ್ನು ಭಾರತೀಯ ಬೌಲರ್ ಗಳು 132 ರನ್ ಗಳಿಗೆ ಕಟ್ಟಿ ಹಾಕಿದರು. ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 33, ಕಾಲಿನ್ ಮಾನ್ರೊ 26, ಟಿಮ್ ಸೆಫರ್ಟ್ 33 ರನ್ ಗಳಿಸಿದರು. ಅಂತಿಮವಾಗಿ ನ್ಯೂಜಿಲ್ಯಾಂಡ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.
ಇನ್ನು ನ್ಯೂಜಿಲ್ಯಾಂಡ್ ನೀಡಿದ ಸಾಧರಣ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು.
ಟೀಂ ಇಂಡಿಯಾ ಪರ ಲೋಕೇಶ್ ರಾಹುಲ್ 57 ರನ್ ಗಳಿಸಿದರೆ, ಶ್ರೇಯಸ್ ಐಯ್ಯರ್ 44 ರನ್ ಗಳಿಸಿದರು.