ಆಕ್ಲೆಂಡ್, ಜ.24 (Daijiworld News/PY) : ಆಕ್ಲಂಡ್ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡವು 6 ವಿಕೆಟ್ಗಳನ್ನು ಪಡೆದು ಗೆಲುವು ಸಾಧಿಸಿದೆ.
ನ್ಯೂಝಿಲ್ಯಾಂಡ್ ನೀಡಿದ್ದ 203 ರನ್ಗಳ ಸವಾಲನನ್ನು ಬೆನ್ನತ್ತಿದ ಕೆ.ಎಲ್ ರಾಹುಲ್ (56), ಶ್ರೇಯಸ್ ಅಯ್ಯರ್ (ಅಜೇಯ 58) ಅವರ ಭರ್ಜರಿ ಅರ್ಧಶತಕದೊಂದಿಗೆ ವಿರಾಟ್ ಕೊಹ್ಲಿ (45) ಅವರ ಬ್ಯಾಟಿಂಗ್ನಿಂದ 6 ವಿಕೆಟ್ಗಳನ್ನು ಪಡೆದು , 19 ಓವರ್ಗಳಲ್ಲಿ ಭಾರತ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ವಿರಾಟ್ ಕೊಹ್ಲಿ ನ್ಯೂಝಿಲ್ಯಾಂಡ್ಗೆ ಬ್ಯಾಂಟಿಗ್ ನೀಡಿದರು. ಕಾಲಿನ್ ಮನ್ರೋ (59), ನಾಯಕ ಕೇನ್ ವಿಲಿಯಮ್ಸನ್ (51) ಹಾಗೂ ಕೊನೆಯ ಇನ್ನಿಂಗ್ಸ್ನಲ್ಲಿ ಅನುಭವಿ ರಾಸ್ ಟಯ್ಲರ್ (54) ಉತ್ತಮ ಆಟದಿಂದ ನ್ಯೂಝಿಲ್ಯಾಂಡ್ 20 ಓವರುಗಳಲ್ಲಿ 05 ವಿಕೆಟ್ಗಳನ್ನು ಕಳೆದುಕೊಂಡು 203 ರನ್ ದಾಖಲಿಸಿತ್ತು.
ನ್ಯೂಝಿಲ್ಯಾಂಡ್ ನೀಡಿದ್ದ 203 ರನ್ಗಳ ಸವಾಲನನ್ನು ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರಕಲಿಲ್ಲ. ತಂಡ 16 ರನ್ ಕಲೆ ಹಾಕುವಷ್ಟರಲ್ಲೇ ರೋಹಿತ್ ಶರ್ಮಾ7 ರನ್ ಗಳಿಸಿ ಔಟಾದರು. ನಂತರ ರಾಹುಲ್ಗೆ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಉತ್ತಮ ರನ್ ಕಲೆ ಹಾಕಲು ಜೊತೆಯಾಟವಾಡಿದ ಈ ಜೋಡಿ 99 ರನ್ಗಳನ್ನು ಕಲೆಹಾಕಿ ತಂಡವನ್ನು ಗೆಲುವಿನತ್ತ ಸಾಗಿಸಿದರು.
ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೆ.ಎಲ್.ರಾಹುಲ್ ಅವರು ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 56 ರನ್ ಸಿಡಿಸಿ ಔಟಾದರು.
ರಾಹುಲ್ ಔಟಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ 45 ರನ್ ಗಳಿಸಿ ಔಟಾದರು. 9 ಓವರ್ಗಳು ಮಾತ್ರ ಉಳಿದಿದ್ದು ತಂಡದ ಗೆಲುವಿಗೆ 80ಕ್ಕೂ ಹೆಚ್ಚು ರನ್ಗಳ ಅಗತ್ಯವಿದ್ದ ವೇಳೆ ಶ್ರೇಯಸ್ ಐಯ್ಯರ್ ಅವರು ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಹಾದಿಯತ್ತ ಸಾಗಿಸಿದ್ದು ಅಲ್ಲದೇ ಕೇವಲ 29 ಎಸೆತಗಳಲ್ಲಿ 58 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ವೇಳೆ ಶಿವಂ ದುಬೆ (13) ಮತ್ತು ಮನೀಶ್ ಪಾಂಡೆ (ಅಜೇಯ 14) ಶ್ರೇಯಸ್ ಐಯ್ಯರ್ಗೆ ಉತ್ತಮ ಬೆಂಬಲ ನೀಡಿದರು.