ಬೆಂಗಳೂರು, ಜ 19(DaijiworldNews/SM): ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಆಸಿಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ ಗೆದ್ದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸಿಸ್ ಭಾರತ ತಂಡಕ್ಕೆ ಗೆಲ್ಲಲು 286 ರನ್ ಗಳ ಸಾಧರಣ ಮೊತ್ತದ ಗುರಿ ನೀಡಿತು. ಆಸಿಸ್ ಪರ ಸ್ಮಿತ್ 131 ಶತಕ ಸಿಡಿಸಿ ಮಿಂಚಿದರು.
ಆಸ್ಟ್ರೇಲಿಯಾ ನೀಡಿದ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ರೋಹಿತ್ ಶರ್ಮಾ 119ರನ್ ಗಳಿಸಿ ಮತ್ತೊಮ್ಮೆ ಚಿನ್ನಸ್ವಾಮಿ ಅಂಗಳದಲ್ಲಿ ಆಸಿಸ್ ವಿರುದ್ಧ ಮಿಂಚಿದರು. ನಾಯಕ ಕೊಹ್ಲಿ 89 ರನ್ ಗಳಿಸಿದರು. ಶ್ರೇಯಸ್ ಐಯ್ಯರ್ 44 ರನ್ ಗಳ ಕೊಡುಗೆ ನೀಡಿದರು.
ಅಂತಿಮವಾಗಿ 47.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 289 ರನ್ ಗಳನ್ನು ಗಳಿಸಿ ಟೀಂ ಇಂಡಿಯಾ ಗೆಲುವಿನ ನಗೆ ಚೆಲ್ಲಿತು.