ನವದೆಹಲಿ, ಜ 16 (DaijiworldNews/SM): ಟೀಂ ಇಂಡಿಯಾದ ಮೈಲಿಗಲ್ಲು, ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಎಲ್ಲರ ನೆಚ್ಚಿನ ಮಹಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗುತ್ತಿದ್ದಾರೆ. ಶೀಘ್ರದಲ್ಲೇ ನಿವೃತಿ ಘೋಷಿಸಲಿದ್ದಾರೆ ಎಂದು ಇತ್ತೀಚಿಗೆ ರವಿಶಾಸ್ತ್ರಿ ತಿಳಿಸಿದ್ದರು. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹೇಂದ್ರ ಸಿಂಗ್ ಅಂದು ಮಾಡಿದ್ದ ಋಣವನ್ನು ಸಂದಾಯ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿದ್ದ ಸಂದರ್ಭ, ಸೌರವ್ ಗಂಗೂಲಿ ಅವರಿಗೆ ತಮ್ಮ ಕೊನೆಯ ಟೆಸ್ಟ್ ನ ಕೊನೆಯ ದಿನ ನಾಯಕತ್ವ ನೀಡಿ ಗೌರವಯುತ ವಿದಾಯ ತಿಳಿಸಿದ್ದರು.
ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಧೋನಿಯ ಋಣ ತೀರಿಸುವ ಅವಕಾಶ ಇಲ್ಲವಾಗಿದೆ. ಕಾರಣ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ 2019-2020ರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಧೋನಿ ಯಾವುದೇ ವಿಭಾಗದಲ್ಲಿ ಸ್ಥಾನ ಪಡೆದಿಲ್ಲ. 2019 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಧೋನಿ ಸಂಪೂರ್ಣವಾಗಿ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ ಮತ್ತು ನಿವೃತ್ತಿಯ ಬಗ್ಗೆ ಮೌನ ತಾಳಿದ್ದಾರೆ. ಇದರಿಂದಾಗಿ ಧೋನಿಯವರನ್ನು ಕೈಬಿಡಲಾಗಿದೆ.