ನವದೆಹಲಿ, ಜ 15 (DaijiworldNews/SM): ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಳೆದ ವರ್ಷವಿಡೀ ಅದ್ಭುತ ಫಾರ್ಮ್ ನಲ್ಲಿದ್ದು, ಅಭೂತಪೂರ್ವ ರನ್ ಗಳಿಸಿದ್ದರು. ಇದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ರೋಹಿತ್ ರನ್ನು ‘2019 ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ಸ್ಪಿರಿಟ್ ಆಫ್ ಕ್ರಿಕೆಟ್’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ರೋಹಿತ್ ಕಳೆದ ವರ್ಷ ಏಳು ಏಕದಿನ ಶತಕ ಸೇರಿದಂತೆ 10 ಶತಕಗಳನ್ನು ಗಳಿಸಿದ್ದರು. ಇನ್ನು ಏಳು ಏಕದಿನಗಳಲ್ಲಿ ಐದು ಪಂದ್ಯಗಳು 2019 ರ ವಿಶ್ವಕಪ್ನ ವೇಳೆ ನಡೆದ ಪಂದ್ಯಗಳಾಗಿವೆ. ಪಂದ್ಯಾವಳಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿ ಗಮನಸೆಳೆದವರು ರೋಹಿತ್ ಶರ್ಮಾ.
ಇನ್ನು ಓವಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ವಿಶ್ವಕಪ್ ಹಣಾಹಣಿಯ ಸಂದರ್ಭದಲ್ಲಿ, ಬಾಲ್ ಟ್ಯಾಂಪರಿಂಗ್ ಹಗರಣದ ಮೇಲೆ ಸ್ಮಿತ್ ಒಂದು ವರ್ಷದ ನಿಷೇಧ ಎದುರಿಸಿದ್ದರು. ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಸ್ಮಿತ್ಗೆ ಬೇಸರವಾಗುವ ಟೀಕೆಗಳನ್ನು ಮಾಡದಂತೆ ಅಭಿಮಾನಿಗಳನ್ನು ಕೋಹ್ಲಿ ಮನವೊಲಿಸಿದ ರೀತಿ ಕಂಡು ಕೊಹ್ಲಿ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.