ಚೆನ್ನೈ, ಜ 12 (DaijiworldNews/SM): ಆಸ್ಟ್ರೇಲಿಯಾ ಓಪನ್ ನ ಮಿಶ್ರಾ ಡಬಲ್ಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ ಸೆಣಸಾಡಲು ಸಿದ್ದವಾಗಿದೆ. ಹಲವು ಸಮಯದಿಂದ ಈ ಜೋಡಿ ಕಣಕ್ಕಿಳಿದಿರಲಿಲ್ಲ.
ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದ ಬಳಿಕ ಈ ಜೋಡಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಈ ಜೋಡಿ ಒಂದೇ ಕಾಣದಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಸಾನಿಯಾಗೆ ಜೋಡಿಯಾಗಿ ಆಡಲು ರಾಜೀವ್ ರಾಮ್ ಮುಂದಾಗಿದ್ದರು. ಆದರೆ ಈ ಪಂದ್ಯಾವಳಿಯಿಂದ ಅವರು ಹೊರಬಂದಿದ್ದು, ಸಾನಿಯಾ ಜೊತೆಗೂಡಿ ಸೆಣಸಾಡುವ ಅವಕಾಶವನ್ನು ಬಿಟ್ಟಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಬೋಪಣ್ಣ, ತಾನು ಸಾನಿಯಾ ಜತೆಯಾಗಿ ಆಡಲಿದ್ದೇನೆ ಎಂದಿದ್ದಾರೆ.