ಸಿಡ್ನಿ, ಜ 3(Daijiworld News/MSP): ಪಾಕ್ ನ ಕ್ರಿಕೆಟ್ ಆಟಗಾರರು ಸದಾ ಒಂದಲ್ಲೊಂದು ವಿವಾದವನ್ನು ಸುತ್ತಿಕೊಳ್ಳುತ್ತಿರುತ್ತಾರೆ. ಹೌದು ಆಸ್ಟ್ರೇಲಿಯಾದ ಜನಪ್ರಿಯ ಬಿಗ್ ಬಾಷ್ ಲೀಗ್ (ಬಿಬಿಎಲ್) ಟ್ವೆಂಟಿ-20 ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್, ಗಂಟಲು ಕತ್ತರಿಸುವ ಸನ್ನೆ ಮೂಲಕ ವಿಕೃತ ಸಂಭ್ರಮಾಚರಣೆ ಮಾಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಸಿಡ್ನಿ ಥಂಡರ್ ವಿರುದ್ಧ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಹ್ಯಾರಿಸ್ ರೌಫ್ ಗಮನ ಸೆಳೆದಿದ್ದರು. ಆದ್ರೆ ಪ್ರತಿ ವಿಕೆಟ್ ಪಡೆದಾಗಲೂ ಅಕ್ರಮಣಕಾರಿ ದೇಹಭಾಷೆ ಕುತ್ತಿಗೆ ಕೊಯ್ದು ಮರ್ಡರ್ ಮಾಡುವ ರೀತಿಯಲ್ಲಿ ಸನ್ನೆ ಮಾಡಿ ಮಾಡಿ ವಿವಾದತ್ಮಕ ಸಂಭ್ರಮವನ್ನು ಆಚರಿಸಿದ್ದಾರೆ. ಇದರ ವಿಡಿಯೋವನ್ನು ಬಿಬಿಎಲ್ ಸಹ ವೀಡಿಯೊವನ್ನು ಹಂಚಿಕೊಂಡಿದೆ, ಇದರಲ್ಲಿ ರೌಫ್ ಅವರ ಆಚರಣೆಯ ಶೈಲಿಯನ್ನು ಸ್ಪಷ್ಟವಾಗಿ ಕಾಣಬಹುದು. ತಮ್ಮ ವಿಕೃತ ಸಂಭ್ರಮಾಚರಣೆಗಾಗಿ ನೆಟ್ಟಿಗರಿಂದ ಭಾರಿ ಟೀಕೆಗೆ ಒಳಗಾಗಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ರಗ್ಬಿ ಆಟಗಾರ ಡಾರಿಲ್ ಬ್ರಾಹ್ಮನ್ ರೌಫ್ ಅವರ ಆಚರಣೆಯ ಶೈಲಿಯ ಬಗ್ಗೆ ತಮ್ಮ ಅಸಮಾಧಾನವನ್ನು ಸೂಚಿಸಿದ್ದಾರೆ.