ನವದೆಹಲಿ, ಡಿ 29 (DaijiworldNews/SM): ಕ್ರಿಕೆಟ್ ತಂಡಕ್ಕೆ ವೇಗದ ಬೌಲರ್ ಗಳ ಪಾತ್ರ ನಿರ್ಣಾಯಕವಾಗಿದೆ. ವೇಗಿಗಳ ಬಗ್ಗೆ ಟೀಂ ಇಂಡಿಯಾ ಆಟಗಾರ ಇಶಾಂತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ವೇಗದ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಫಿಟ್ನೆಸ್ ಬಹಳ ಮುಖ್ಯ ಎಂದು ಇಶಾಂತ್ ಸರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತು ಅದಕ್ಕೆ ನಿರಂತರ ಅಭ್ಯಾಸದ ಅಗತ್ಯವಿದೆ. ಇದನ್ನು ಭಾರತೀಯ ವೇಗಿಗಳು ಕಾಯ್ದುಕೊಂಡಿದ್ದು, ಅದರಿಂದಲೇ, ಬೌಲರ್ಗಳು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಹೇಳಿದ್ದಾರೆ.
ರಣಜಿ ಟ್ರೋಫಿಯ ಗ್ರೂಪ್ ಎ ಮತ್ತು ಬಿ ಪಂದ್ಯಗಳಲ್ಲಿ ಹೈದರಾಬಾದ್ ವಿರುದ್ಧ ಏಳು ವಿಕೆಟ್ ಜಯಗಳಿಸಿದ ನಂತರ ದೆಹಲಿ ವೇಗದ ಬೌಲರ್ ಇಶಾಂತ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಬೌಲರ್ಗಳು ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಾಯ್ಸುಕೊಳ್ಳುವ ನಿಟ್ಟಿನಲ್ಲಿ ಫಿಟ್ ನೆಸ್ ಬಹುಮುಖ್ಯ ಎಂದಿದ್ದಾರೆ.