ಮೆಲ್ಬೋರ್ನ್, ಡಿ 29(Daijiworld News/PY) : ಆಸ್ಟ್ರೇಲಿಯಾ ತಂಡದ ಹಿರಿಯ ವೇಗಿ ಪೀಟರ್ ಸಿಡ್ಲೆ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಭಾನುವಾರ ವಿದಾಯ ಘೋಷಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೂರನೆ ಪಂದ್ಯದಲ್ಲಿ ಸ್ಥಾನ ಪಡೆಯದ ಕಾರಣ ಪೀಟರ್ ಸಿಡಲ್ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
2008ರಲ್ಲಿ ಭಾರತ ವಿರುದ್ಧ ನಡೆದ ಟೆಸ್ಟ್ ಮೂಲಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದ ಆಟಗಾರ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಸಚಿನ್ ತೆಂಡುಲ್ಕರ್ ವಿಕೆಟ್ ಕಿತ್ತು ಸಾಧನೆ ಮಾಡಿದ್ದರು. 2010ರಲ್ಲಿ ಸಿಡ್ಲೆ ತಮ್ಮ ಜನ್ಮದಿನದಂದೇ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು, 20 ಅಂತರಾಷ್ಟ್ರೀಯ ಏಕದಿನ, ಎರಡು ಟಿ 20 ಪಂದ್ಯಗಳನ್ನಾಡಿದ್ದಾರೆ.
35ರ ಹರೆಯದ ವೇಗಿ ಪೀಟರ್ ಸಿಡಲ್ ಆಸ್ಟ್ರೇಲಿಯಾ ಪರ ಹೆಚ್ಚಾಗಿ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಸಿಡ್ಲೆ ಅವರು ದೇಶೀಯ ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದು ವಿಕ್ಟೋರಿಯಾ ಹಾಗೂ ಬಿಗ್ ಬ್ಯಾಶ್ಟಿ 20ಲೀಗ್ನಲ್ಲಿ ಅಡಿಲೇಡ್ ಸ್ಟ್ರೈಕ್ಸ್, ಇಂಗ್ಲಿಷ್ ಕೌಂಟಿ ಎಸ್ಟೆಕ್ಸ್ ಪರ ಆಡುವುದನ್ನು ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ.