ಕರಾಚಿ, ಡಿ 28(Daijiworld News/PY) : 'ಶೊಯೇಬ್ ಅಖ್ತರ್ ಅವರ ಹೇಳಿಕೆಗೆ ಆರಂಭದಲ್ಲಿ ತಮಗೆ ಅನ್ಯಾಯವಾಗಿದೆ ಅಖ್ತರ್ ಭಾಯ್ ಹೇಳಿರುವುದು ಸತ್ಯ. ನನ್ನ ಜೊತೆಗೆ ಅನ್ಯಾಯ ಎಸಗಿರುವ ಎಲ್ಲರ ಹೆಸರನ್ನೂ ಬಹಿರಂಗ ಪಡಿಸುತ್ತೇನೆ' ಎಂದಿದ್ದ ಕನೇರಿಯಾ ಇದೀಗ ಏಕಾಏಕಿ ಯೂಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ದಾನೀಶ್ ಕನೇರಿಯಾ, 'ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ ಹಾಗೂ ಪಾಕ್ ತಂಡಕ್ಕೆ ಜಯ ತಂದುಕೊಡಬೇಕು ಎಂಬುದು ನನ್ನ ಆಶಯ, ನನ್ನ ಹಿಂದೆ ಹಲವಾರು ಜನ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ, ಆದರೆ ಪಾಕ್ ಆಟಗಾರಿಂದ ಕಿರುಕುಳವಾಗುತ್ತಿದೆ ಎಂದು ನಾನು ಎಲ್ಲಿಯೂ ಹೇಳಿಕೊಂಡಿಲ್ಲ, ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ಧರ್ಮದವನಾಗಿ ಆಡುತ್ತಿದ್ದೇನೆ, ಯಾವುದೇ ರೀತಿಯ ತಾರತಮ್ಯ ಎದುರಾದರೂ ಸಹ ನಾನು ಹಿಂದೂ ಧರ್ಮದಿಂದ ಮತಾಂತರವಾಗಬೇಕು ಎಂದುಕೊಳ್ಳಲಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಲೆಗ್ ಸ್ಪಿನ್ನರ್ ಆಗಿರುವ ದಾನೀಶ್ ಕನೇರಿಯಾ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಅಜೀವ ನಿಷೇಧ ಶಿಕ್ಷೆ ಎದುರಿಸುತ್ತಿರುವ ಸಂದರ್ಭ ತನ್ನನ್ನು ಹಿಂದೂ ಆಟಗಾರನೆಂದು ಕೆಲ ಆಟಗಾರರು ಪ್ರತೀ ವಿಚಾರದಲ್ಲಿ ಆರೋಪಿಸುತ್ತಿದ್ದರು, ಆದರೆ ಎಂದಿಗೂ ಧರ್ಮದ ಬದಲಾವಣೆಯ ಆಲೋಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಅವರ ವಿರುದ್ಧ ನಡೆದ ಅನ್ಯಾಯಗಳ ಕುರಿತಾಗಿ ಶೊಯೆಬ್ ಅಖ್ತರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ದಾನೀಶ್ ಕನೇರಿಯಾ, ಈ ವಿಷಯವನ್ನು ನಾನು ಸಮಸ್ಯೆಯೆಂದು ಎಲ್ಲಿಯೂ ಹೇಳಿಕೊಂಡಿಲ್ಲ, ಕ್ರಿಕೆಟ್ ಮೇಲೆ ಏಕಾಗ್ರತೆ ವಹಿಸುವ ಕಾರಣದಿಂದ ಈ ವಿಷಯಗಳತ್ತ ಗಮನಹರಿಸಿಲ್ಲ ಪಾಕಿಸ್ತಾನಕ್ಕೆ ಪಂದ್ಯಗಳನ್ನು ಗೆದ್ದುಕೊಡುವುದಷ್ಟೇ ನನ್ನ ಗುರಿಯಾಗಿತ್ತು. ಒಬ್ಬ ಹಿಂದೂ ಹಾಗೂ ಒಬ್ಬ ಪಾಕಿಸ್ತಾನಿ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಇಲ್ಲಿ ಪಾಕಿಸ್ತಾನದ ಕ್ರಿಕೆಟಿಗರ ವಿರುದ್ಧ ನಕಾರಾತ್ಮಕವಾಗಿ ಬಿಂಬಿಸುವುದು ಬೇಡ. ಏಕೆಂದರೆ ಧರ್ಮವನ್ನು ಪಕ್ಕಕ್ಕಿಟ್ಟು ಹಲವು ಆಟಗಾರರು ನನಗೆ ಪ್ರೋತ್ಸಾಹ ನೀಡಿದ್ದಾರೆ," ಎಂದು ಹೇಳಿದ್ದಾರೆ.