ಇಸ್ಲಮಾಬಾದ್, ಡಿ 27 (Daijiworld News/PY) : ಪಾಕಿಸ್ತಾನ ತಂಡದಲ್ಲಿದ್ದ ಹಿಂದೂ ಆಟಗಾರನಾದ ದಾನಿಶ್ ಕನೆರಿಯ ಅವರಿಗೆ ಸಹ ಆಟಗಾರರು ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಪಾಕ್ ಕ್ರಿಕೆಟಿಗ ಶೊಯೆಬ್ ಅಖ್ತರ್ ತಿಳಿಸಿದ್ದಾರೆ.
ಇಸ್ಲಾಂ ಬಹುಸಂಖ್ಯಾ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳಾಗುತ್ತಿವೆ ಎಂದು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯ ಪರವಾಗಿ ವಾದ ಮಂಡಿಸುತ್ತಿರುವ ಬೆನ್ನಲ್ಲೇ ಶೊಯೆಬ್ ಅಖ್ತರ್ ಅವರ ಹೇಳಿಕೆ ಬಂದಿದ್ದು, ಅವರು ಹೇಳಿರುವ ಹೇಳಿಕೆ ಈಗ ಭಾರಿ ವೈರಲ್ ಆಗ್ತಾ ಇದೆ.
ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶೊಯೆಬ್ ಅಖ್ತರ್, 'ಪಾಕ್ ತಂಡದಲ್ಲಿರುವ ಹಿಂದೂ ಆಟಗಾರನಾಸ ದಾನಿಶ್ ಕನೇರಿಯಾ ಅವರನ್ನು ತಂಡದಲ್ಲಿರುವ ಇತರ ಆಟಗಾರರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ದಾನಿಶ್ ಕನೇರಿಯಾ ಹಿಂದೂ ಆಟಗಾರನಾದ ಕಾರಣ ಅವರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ' ಎಂದು ತಿಳಿಸಿದ್ದಾರೆ.
ಪಾಕ್ ತಂಡದ ಇತರ ಆಟಗಾರರೊಂದಿಗೆ ದಾನಿಶ್ ಕನೇರಿಯಾ ಊಟ ಮಾಡಿದ್ದಲ್ಲಿ, ನಮ್ಮ ಟೇಬಲ್ನಿಂದ ಊಟ ತೆಗೆದುಕೊಂಡಲ್ಲಿ, ತಂಡದ ನಾಯಕ ದಾನಿಶ್ ಮೇಲೆ ಕೋಪಿಸಿಕೊಳ್ಳುತ್ತಿದ್ದರು, ಎಂದು ಪಾಕ್ ತಂಡದವರು ಹಿಂದೂ ಆಟಗಾರನನ್ನು ನಡೆಸಿಕೊಳ್ಳುತ್ತಿದ್ದ ರೀತಿಯ ಬಗ್ಗೆ ಹೇಳಿದ್ದಾರೆ.
ಶೊಯೆಬ್ ಅಖ್ತರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದಾನಿಶ್ ಕನೇರಿಯಾ, 'ಶೊಯೆಬ್ ಅಖ್ತರ್ ಹೇಳುತ್ತಿರುವುದು ನಿಜ, ನನಗೆ ಬೆಂಬಲ ನೀಡಿದ ಎಲ್ಲಾ ಪಾಕಿಸ್ತಾನದ ಹಿರಿಯ ಆಟಗಾರರಿಗೆ ನನ್ನ ಧನ್ಯವಾದಗಳು' ಎಂದಿದ್ದಾರೆ.