ಮೆಲ್ಬೋರ್ನ್, ಡಿ 24 (Daijiworld News/MB) : ದಶಕದ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕರನ್ನಾಗಿ ಭಾರತದ ಖ್ಯಾತ ಆಟಗಾರ ಎಂ.ಎಸ್.ಧೋನಿ ಅವರು ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಹಾಗೆಯೇ ಭಾರತದ ರೋಹಿತ್ ಶರ್ಮಾ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
"ಎಂ.ಎಸ್ ಧೋನಿ ಒಂದು ದಶಕದ ಕಾಲ ತಮ್ಮ ಬ್ಯಾಟಿಂಗ್ನಿಂದಾಗಿ ಭಾರತ ತಂಡದಲ್ಲಿ ಮಿಂಚಿದ್ದಾರೆ. ಅವರು ಭಾರತದ ಏಕ ದಿನದ ತಂಡಕ್ಕೆ ಶಕ್ತಿಯಾಗಿದ್ದರು. ೨೦೧೧ರಲ್ಲಿ ವಿಶ್ವಕಪ್ ಪಡೆಯಲು ಮಾರ್ಗದರ್ಶನ ನೀಡಿದ್ದರು. ಅಷ್ಟು ಮಾತ್ರವಲ್ಲದೇ ಬಲಗೈ ಬ್ಯಾಟ್ಸ್ಮನ್ ಆಗಿರುವ ಇವರು ಭಾರತದ ಗುಡ್ ಫಿನಿಶರ್ ಆಗಿ ಹೆಸರು ಪಡೆದಿದ್ದಾರೆ" ಎಂದು ಧೋನಿ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಮೂವರು ಭಾರತೀಯರನ್ನು ಸೇರಿ ಹಾಶೀಮ್ ಆಮ್ಲಾ, ಎ.ಬಿ ಡಿವಿಲಿರ್ಸ್, ಶಕೀಬ್ ಅಲ್ ಹಸನ್, ಜೋಸ್ ಬಟ್ಲರ್, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್ ಹಾಗೂ ಲಸಿತ್ ಮಲಿಂಗಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಏಕದಿನ ದಶಕದ ತಂಡದಲ್ಲಿ ರೋಹಿತ್ ಶರ್ಮಾ, ಹಾಶೀಮ್ ಆಮ್ಲಾ, ವಿರಾಟ್ ಕೊಹ್ಲಿ, ಎ.ಬಿ ಡಿವಿಲಿಯರ್ಸ್, ಶಕೀಬ್ ಅಲ್ ಹಸನ್, ಜೋಸ್ ಬಟ್ಲರ್, ಎಂ.ಎಸ್ ಧೋನಿ, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಲಸಿತ್ ಮಲಿಂಗಾ ಇದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಟೆಸ್ಟ್ ತಂಡದಲ್ಲಿ ಅಲ್ಸ್ಟೈರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ (ನಾಯಕ), ಎ.ಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಡೇಲ್ ಸ್ಟೇನ್, ನಥಾನ್ ಲಿಯಾನ್ ಜೇಮ್ಸ್ ಅಂಡರ್ಸನ್ ಇದ್ದಾರೆ.