ನವದೆಹಲಿ, ಡಿ 21 (DaijiworldNews/SM): ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಟೀಂ ಇಂಡಿಯಾ 1-1ರ ಸಮಬಲ ಸಾಧಿಸಿದೆ. ಸರಣಿ ಗೆಲ್ಲಲು ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲ್ಲುವುದು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ತಂಡಗಳು ಎಲ್ಲಾ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸಿದೆ. ವಿವಿಧ ಕಸರತ್ತುಗಳನ್ನು ಮಾದಿಕೊಂಡಿದೆ.
ಎರಡನೇ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಹೆಚ್ಚಿನ ಆತ್ಮ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಮೊದಲ ಪಂದ್ಯ ಗೆದ್ದಿರುವ ವಿಂಡೀಸ್ ಕೂಡ ಅಂತಿಮ ಪಂದ್ಯವನ್ನು ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದೆ. ಆದರೆ, ಉಭಯ ತಂಡಗಳು ಎಲ್ಲಾ ರೀಟಿಯಲ್ಲೂ ಪಂದ್ಯ ಗೆಲ್ಲಲು ಸಿದ್ಧತೆಗಳನ್ನು ನಡೆಸಿಕೊಂಡಿವೆ. ಆದರೆ, ಈ ಹಿಂದೆ ರವಿವಾರದಂದು ನಡೆದಿರುವ ಪಂದ್ಯಗಳಲ್ಲಿ ಬಹುತೇಕ ಪಂದ್ಯಗಳನ್ನು ಟೀಂ ಇಂಡಿಯಾ ಕೈ ಚೆಲ್ಲಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ೨೨ರ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ವಿಜಯ ಲಕ್ಷ್ಮೀ ರವಿವಾರದಂದು ಯಾರ ಕೈ ಹಿಡಿಯಲಿದೆ ಎಂಬುವುದು ಪಂದ್ಯದ ಬಳಿಕ ತಿಳಿಯಲಿದೆ.