ಮುಂಬೈ, ಡಿ 19 (Daijiworld News/MB): ಟ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಪುತ್ರಿ ಸನಾ ಇನ್ಸ್ಟಾ ಗ್ರಾಂನಲ್ಲಿ ಪೌರತ್ವ ತಿದ್ದುಪಡಿ ವಿರುದ್ಧ ಪೋಸ್ಟ್ ಹಾಕಿದ ಬೆನ್ನಲ್ಲೇ ತಂದೆ ಸೌರವ್ "ಈ ವಿಷಯದಿಂದ ಸನಾಳನ್ನು ದೂರವಿರಿಸಿ, ಇದು ಸತ್ಯವಲ್ಲ, ಅವಳು ರಾಜಕೀಯದ ಕುರಿತು ತಿಳಿಯುವಷ್ಟು ಪ್ರಬುದ್ಧೆಯಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಸೌರವ್ ಪುತ್ರಿ ಸನಾ ಕುಷ್ವಂತ್ ಸಿಂಗ್ ಅವರ ಕಾದಂಬರಿಯಾದ 'ದಿ ಎಂಡ್ ಆಫ್ ಇಂಡಿಯಾ' ಆಯ್ದ "ನಿರಂಕುಶ ಆಡಳಿತಕ್ಕೆ ತನ್ನನ್ನು ತಾನು ಅಭಿವೃದ್ಧಿ ಪಡೆಸಲು ಯಾವುದಾದರೂ ಸಂಘಟನೆಗಳು ಅಥವಾ ಧರ್ಮ ಬೇಕಾಗುತ್ತದೆ. ದ್ವೇಷದ ಮೇಲೆ ಕಟ್ಟಲಾದ ಚಳುವಳಿ ತನ್ನನ್ನು ಉಳಿಸಿಕೊಳ್ಳಲು ನಿರಂತರವಾಗಿ ದ್ವೇಷ ಮತ್ತು ಕಲಹಗಳನ್ನು ಸೃಷ್ಟಿಸುತ್ತದೆ. ನಾವು ಮುಸ್ಲಿಮರು ಅಥವಾ ಕ್ರೈಸ್ತರು ಅಲ್ಲಾ ಎನ್ನುವ ಕಾರಣಕ್ಕೆ ಸುರಕ್ಷಿತವಾಗಿದ್ದೇವೆ. ಸಂಘಟನೆಗಳು ಈಗಾಗಲೇ ಎಡಪಂಥೀಯ ಯುವಕರನ್ನು ಗುರಿಯಾಗಿಸಿದೆ. ನಾಳೆ ಆ ಸಂಘಟನೆ ಮಾಂಸ ತಿನ್ನವವರ ಮೇಲೆ, ಸ್ಕರ್ಟ್ ಧರಿಸುವ ಮಹಿಳೆಗೆ ಹೀಗೆ ಹಲವರ ವಿರುದ್ಧ ತಿರುಗಿ ಬೀಳುತ್ತದೆ. ಯಾರನ್ನಾದರೂ ಭೇಟಿಯಾಗಿ ಸ್ವಾಗತಿಸುವಾಗ ಜೈಶ್ರೀರಾಮ್ ಎಂದು ಕೂಗುವಂತೆ ಬದಲಾಗುತ್ತದೆ" ಎನ್ನುವುದನ್ನು ಪೌರತ್ವ ತಿದ್ದುಪಡಿ ಮಸೂದೆಯಿಂದ ಹೊತ್ತಿ ಉರಿಯುತ್ತಿರುವ ಈ ಪ್ರಸ್ತುತ ಕಾಲದಲ್ಲಿ ಪೋಸ್ಟ್ ಮಾಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಸೌರವ್ ಗಂಗೂಲಿ, "ಈ ವಿಷಯದಿಂದ ಸನಾಳನ್ನು ದೂರವಿರಿಸಿ, ಇದು ಸತ್ಯವಲ್ಲ. ಅವಳು ರಾಜಕೀಯದ ಕುರಿತು ತಿಳಿಯುವಷ್ಟು ಪ್ರಬುದ್ಧೆಯಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಸನಾ ಪೋಸ್ಟ್ ಮಾಡಿರುವ ಕಾದಂಬರಿಯು ಭಾರತದ ಸಮಸ್ಯೆಯ ಕುರಿತು ವಿವರಿಸಲಾಗಿದೆ. ಗುಜಾರಾತ್ ಹತ್ಯಾಕಾಂಡ, ಸಿಖ್ ವಿರೋಧಿ ಗಲಬೆ ಮೊದಲಾದ ಘಟನೆಗಳನ್ನು ಈ ಪುಸ್ತಕದಲ್ಲಿ ವಿಮರ್ಶಿಸಲಾಗಿದೆ.
ಸೌರವ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಹಲವರು "ಅವಳಿಗೆ 18 ವರ್ಷ ಆಗಿದೆ. ಅವಳು ರಾಜಕೀಯ ನಿರ್ಧಾರ ಮಾಡಲು ಪ್ರಬುದ್ಧಳು. ಅವಳಿಗೆ ಭಾರತದ ಪರಿಸ್ಥಿತಿಯ ಕುರಿತು ತಿಳಿದಿದೆ" ಎಂದು ಹೇಳಿದ್ದಾರೆ.
ಆದರೆ ಈಗ ಸನಾ ಪೋಸ್ಟ್ ಮಾಡಿದ 24 ಗಂಟೆಗಳಲ್ಲೇ ಆ ಪೋಸ್ಟ್ ಡಿಲಿಟ್ ಮಾಡಲಾಗಿದೆ.