ನವದೆಹಲಿ, ಡಿ 13 (DaijiworldNews/SM): ಈಗಾಗಲೇ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ. ಇದೀಗ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿಯಾಗಿದೆ. ಟಿ-20 ಸರಣಿ ಸಂದರ್ಭದಲ್ಲಿ ಶಿಖರ್ ಧವನ್ ಗಾಯಗೊಂಡು ಆಘಾತವುಂಟಾಗಿದ್ದರೆ, ಇದೀಗ ಏಕದಿನ ಸರಣಿಯ ವೇಳೆಯಲ್ಲೂ ಭಾರತಕ್ಕೆ ಆಘಾತ ಎದುರಾಗಿದೆ.
ವಿಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತದ ವೇಗಿ ಭುವನೇಶ್ವರ ಕುಮಾರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಟಿ-20 ಪಂದ್ಯದಲ್ಲಿ ಭುವಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಂಡೀಸ್ ವಿರುದ್ಧ ನಡೆಯುವ ಏಕದಿನ ಸರಣಿಗೆ ಭುವಿ ಅಲಭ್ಯರು ಎನ್ನಲಾಗಿದೆ.
ಇನ್ನೊಂದೆಡೆ ಭಾನುವಾರ ಡಿಸೆಂಬರ್ 15ರಿಂದ ವಿಂಡೀಸ್ ವಿರುದ್ಧ ಏಕದಿನ ಸರಣಿ ಆರಂಭಗೊಳ್ಳಲಿದೆ. ಒಂದೊಮ್ಮೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ, ಭುವಿಗೆ ಭಾನುವಾರದ ಪಂದ್ಯದಲ್ಲಿ ಆಟವಾಡಲು ಅಸಾಧ್ಯವಾಗಲಿದೆ. ವೈದ್ಯರ ಸಲಹೆ ಪಡೆದು ಮೈದಾನಕ್ಕೆ ಇಳಿಯಲಿದ್ದಾರೆ. ಭುವನೇಶ್ವರ್ ತಂಡಕ್ಕೆ ಲಭ್ಯರೇ ಅಥವಾ ಇಲ್ಲವೇ ಎಂಬುವುದಕ್ಕೆ ಭಾನುವಾರದಂದು ಉತ್ತರ ಸಿಗಲಿದೆ.