ನವದೆಹಲಿ, ಡಿ 7(Daijiworld News/MSP): "ನಿರ್ದಯ, ಪ್ರತೀಕಾರ ಮತ್ತು ನಿರ್ಣಾಯಕ" - ಹೌದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸವಾಲಿನ ಮೊತ್ತಕ್ಕೆ ಅಷ್ಟೇ ವಿರಾಟ್ ಕೊಹ್ಲಿ 50 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿ ಸೇರಿದಂತೆ ಅಜೇಯ 94 ರನ್ ಪೇರಿಸಿ ತಂಡಕ್ಕೆ ಗೆಲುವಿನ ಸಿಹಿ ನೀಡಿದ್ದರು.
ಆದರೆ ಇಷ್ಟು ಮಾತ್ರ ಅಲ್ಲ, ಈ ಪಂದ್ಯದಲ್ಲಿ ಇನ್ನೊಂದು ವಿಶೇಷತೆ ಇದೆ, ತನ್ನನ್ನು ಹೀಯಾಳಿಸಿದಾತನಿಗೆ ವಿರಾಟ್ ಈ ಪಂದ್ಯದಲ್ಲಿ ಉತ್ತರ ನೀಡಿದ್ದರು. ಎರಡು ವರ್ಷಗಳ ಹಿಂದೆ 2017ರಲ್ಲಿ ವಿಂಡೀಸ್ ಪ್ರವಾಸದಲ್ಲಿ ಜಮೈಕಾ ಪಂದ್ಯದಲ್ಲಿ ವಿಂಡೀಸ್ ಬೌಲರ್ ವಿಲಿಯಮ್ಸ್ ಅಂದು ಕೊಹ್ಲಿ ವಿಕೆಟ್ ಪಡೆದು ನೋಟ್ ಬುಕ್ ನಲ್ಲಿ ಬರೆದಿಡುವಂತೆ ಮೈದಾನದಲ್ಲಿ ವ್ಯಂಗ್ಯವಾಗಿ ಸನ್ಹೆ ಮಾಡಿದ್ದರು.
ಇದಕ್ಕೆ ಉತ್ತರ ಎಂಬಂತೆ ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ವೀರಾವೇಶದ ಪ್ರದರ್ಶನ ನೀಡಿ ಬೌಲರ್ ವಿಲಿಯಮ್ಸ್ ಬೆವರಿಳಿಸಿದ್ದಲ್ಲದೇ, ಭರ್ಜರಿ ಸಿಕ್ಸರ್ ಬಾರಿಸಿದ ಕೊಹ್ಲಿ ಅದೇ ನೋಟ್ ಬುಕ್ ಸನ್ಹೆ ಮೂಲಕ ತಿರುಗೇಟು ನೀಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ವಿರಾಟ್ ಅಭಿಮಾನಿಗಳು ಕೊಹ್ಲಿಯ ಪ್ರತ್ಯುತ್ತರದ ಶೈಲಿಗೆ ಫಿದಾ ಆಗಿದ್ದಾರೆ.