ಮುಂಬೈ, ನ 28 (DaijiworldNews/SM): ವಿಶ್ವಕಪ್ ಪಂದ್ಯಗಳ ಬಳಿಕ ಟೀಂ ಇಂಡಿಯಾ ಬಳಗದಿಂದ ಅನುಭವಿ ನಾಯಕ ಮಹೇಂದ್ರ ಸಿಂಗ್ ದೂರವಾಗಿದ್ದು, ಸುಮಾರು ಐದು ತಿಂಗಳುಗಳು ಕಳೆದರೂ ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿಲ್ಲ. ಇದೀಗ ಅಂತಾರಾಷ್ಟ್ರೀಯ ಪಂದ್ಯಗಳಿಂದ ವಿರಾಮ ಪಡೆದುಕೊಂಡಿರುವ ಧೋನಿಯವರು, ಈ ವರ್ಷ ತನ್ನಲ್ಲಿ ಏನೂ ಕೇಳಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಕೆಟ್ ನಿಂದ ದೂರ ಉಳಿದಿರುವುದಕ್ಕೆ ಮಾಧ್ಯಮದವರು ಧೋನಿಯವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಜನವರಿಯ ವರೆಗೂ ನನಗೆ ಏನು ಕೇಳು ಬೇಡಿ ಎಂದು ತಿಳಿಸಿದ್ದಾರೆ. ಮಾಹಿ ಅವರು ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯದ ಸೆಮಿಫೈನಲ್ಸ್ ಪಂದ್ಯದಲ್ಲಿ ಆಡಿದ್ದು ಕೊನೆಯ ಪಂದ್ಯವಾಗಿದೆ.
ಸದ್ಯ ಯಾವುದೇ ಮಾಹಿತಿ ನೀಡದ ಕಾರಣದಿಂದಾಗಿ ಹಾಗೂ ಮುಂದಿನ ವರ್ರ್ಷ ತನಕ ಯಾವುದೇ ಮಾತುಗಳನ್ನು ಆಡಲ್ಲ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಧೋನಿಯವರನ್ನು ಮತ್ತೆ ಮೈದಾನದಲ್ಲಿ ನೋಡಬೇಕೆನ್ನುವ ಆಸೆ ಅವರ ಅಭಿಮಾಣಿ ಬಳಗಕ್ಕಿದೆ. ಆದರೆ, ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಅವರು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ಆದರೆ, ಸದ್ಯಕ್ಕೆ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಒಂದೆಡೆ ತಂಡದಲ್ಲಿ ಸ್ಥಾನ ಪಡೆಯಲು ಧೋನಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಮತ್ತೊಂದೆಡೆ ಯುವ ಆಟಗಾರರಿಗೆ ಆಯ್ಕೆ ಸಮಿತಿ ಅವಕಾಶ ನೀಡುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ಜನವರಿ ತನಕ ಏನೂ ಕೇಳಬೇಡಿ ಎಂದು ಮಾಹಿ ಪ್ರತಿಕ್ರಿಯೆ ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.