ನವದೆಹಲಿ, ನ 27 (DaijiworldNews/SM): ವಿಶ್ವಕಪ ಪಂದ್ಯದ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದುಕೊಂಡಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಇದೀಗ ಮತ್ತೆ ಗಾಯಗೊಂಡಿದ್ದು, ಮತ್ತೆ ತಂಡದಿಂದ ಹೊರಗುಳಿದುಕೊಂಡಿದ್ದಾರೆ. ಈ ನಡುವೆ, ಮುಂಬರುವ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಟವಾಡಲು ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.
ಶಿಖರ್ ಧವನ್ ಅವರ ಸ್ಥಾನಕ್ಕೆ ಕೇರಳ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶಿಖರ್ ಧವನ್ ಅವರು ಸೈಯದ್ ಮುಷ್ತಾಕ್ ಅಲಿ ಟಿ-20 ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡುವಾಗ ತಮ್ಮ ಮೊಣಕಾಲಿಗೆ ಗಾಯವಾಗಿತ್ತು. ಬಳಿಕ ಚಿಕಿತ್ಸೆ ಹಾಗೂ ವಿಶ್ರಾಂತಿಯನ್ನು ಅವರು ಪಡೆಯುತ್ತಿದ್ದಾರೆ. ಇದೀಗ ವಿಂಡೀಸ್ ಸರಣಿಯಲ್ಲಿ ಆಟವಾಡಲು ಲಭ್ಯರಿದ್ದಾರಾ ಎನ್ನುವ ಬಗ್ಗೆ ವೈದ್ಯರು ತಿಳಿಸಲಿದ್ದಾರೆ. ಒಂದೊಮ್ಮೆ ಅವರಿಗೆ ಪಂದ್ಯದಲ್ಲಿ ಭಾಗವಹಿಸುವುದು ಅಸಾಧ್ಯವಾದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಟೀಂ ಇಂಡಿಯಾ ತಂಡಕ್ಕೆ ಕದ ತೆರೆದಂತಾಗುತ್ತದೆ.