ಕೊಲ್ಕತಾ, ನ ೨೨ (DaijiworldNews/SM):ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿನ ಮೊದಲ ಡೇನೈಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕಮಾಲ್ ಮಾಡಿದೆ. ಮೊದಲ ಪಿಂಕ್ ಬಾಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೊಸ ಮೈಲಿಗಲ್ಲನ್ನು ತಲುಪಿದೆ.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅನಿರೀಕ್ಷಿತ ಪ್ರದರ್ಶನ ನೀಡಿದೆ. ಮೊದಲ ದಿನದ ಪಂದ್ಯದಲ್ಲೇ ಬಾಂಗ್ಲಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಭಾರತದ ದಾಳಿಗೆ ತತ್ತರಿಸಿತು. 106 ರನ್ ಗಳಿಸುವಷ್ಟರಲ್ಲಿ ರನ್ ಗಳಿಸಲಾಗದೆ ಸರ್ವ ಪತನಗೊಂದಿತು.
ಭಾರತದ ಪರ ಇಶಾಂತ್ ಶರ್ಮಾ ಐದು ಹಾಗೂ ಉಮೇಶ್ ಯಾದವ್ ಮೂರು ವಿಕೆಟ್ ಪಡೆದರೆ, ಶಮಿ ಎರಡು ವಿಕೆಟ್ ಪಡೆದರು.
ಇನ್ನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬೃಹತ್ ಮೊತ್ತದ ಮುನ್ಸೂಚನೆ ನೀಡಿದೆ. ಮೊದಲ ದಿನದಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದೆ. ಭಾರತದ ಪರ ಚೇತೇಶ್ವರ ಪೂಜಾರ(55) ಅರ್ಧ ಶತಕ ಸಿಡಿಸಿದರೆ, ನಾಯಕ ಕೊಹ್ಲಿ 59ರನ್ ಗಳೊಂದಿಗೆ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.