ಗಯಾನ, ನ 21 (Daijiworld News/MB): ವೆಸ್ಟ್ ಇಂಡೀಸ್ ವಿರುದ್ದದ ಅಂತಿಮ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತದ ವನಿತೆಯರು ಗೆಲುವು ಸಾದಿಸಿದ್ದು, ಈ ಆಟದಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ 56 ರನ್ ಬಾರಿಸಿ ತಂಡಕ್ಕೆ ಹೆಚ್ಚಿನ ರನ್ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 5-0 ಅಂತರದಿಂದ ಗೆದ್ದಿದ್ದು, ವೇದಾ ಕೃಷ್ಣಮೂರ್ತಿ ಮತ್ತು ಜೆಮಿಮಾ ರೋಡ್ರಿಗಸ್ ತಂಡವನ್ನು ಮೇಲಕ್ಕೆತ್ತಿ 117 ರನ್ ಜೊತೆಯಾಟ ನಡೆಸಿದ್ದಾರೆ. ಜೆಮಿಮಾ 50 ರನ್ ಬಾರಿಸಿದ್ದು ವೇದಾ ಕೃಷ್ಣಮೂರ್ತಿ 56 ರನ್ ಬಾರಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೂರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಆರಂಭಿಕರಾದ ಶಿಫಾಲಿ ಮತ್ತು ಸ್ಮ್ರತಿ ಬೇಗನೇ ವಿಕೆಟ್ ಕಳೆದುಕೊಂಡರೂ ನಂತರ ವೇದಾ ಕೃಷ್ಣಮೂರ್ತಿ ಮತ್ತು ಜೆಮಿಮಾ ರೋಡ್ರಿಗಸ್ ಹೆಚ್ಚಿನ ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುಖ ಮಾಡಿಸಿದ್ದಾರೆ.
135 ರನ್ ನ ಗುರಿ ಹೊಂದಿದ್ದ ವಿಂಡೀಸ್ ವನಿತೆಯರು ನಿಗದಿತ 20 ಓವರ್ ಗಳಲ್ಲಿ 73ರನ್ ಮಾತ್ರ ಗಳಿಸಿದ್ದು, ವಿಂಡೀಸ್ 61 ರನ್ ಅಂತರದಲ್ಲಿ ಭಾರತದ ಎದುರು ಸೋಲನುಭವಿಸಿದೆ. ವಿಂಡೀಸ್ ನ ಕೈಶೋನಾ ನೈಟ್ 22 ರನ್ ಗಳಿಸಿದ್ದು ಅದೇ ಅತಿ ಹೆಚ್ಚಿನ ರನ್ ಆಗಿದೆ.