ಅಬುದಾಬಿ, ನ 19(Daijiworld News/MB): ಅರಬ್ ದೇಶದಲ್ಲಿ ಟಿ 10 ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ತಮ್ಮ ಮರಾಠಾ ಅರೇಬಿಯಾದ ತಂಡದ ಸಹ ಆಟಗಾರ ವೆಸ್ಟ್ ಇಂಡೀಸ್ನ ಚಾಡ್ವಿಕ್ ವಾಲ್ಟನ್ ಅವರಿಗೆ ಪಂಜಾಬಿಯಲ್ಲಿ ಮಾತನಾಡಲು ಯುವರಾಜ್ ಸಿಂಗ್ ಕಲಿಸಿರುವ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಾಲ್ಟನ್ "ನೀವು ಏನು ಮಾಡುತ್ತಿದ್ದೀರಿ? ನಾವು ಹೋಗೋಣ" ಎಂದು ಪಂಜಾಬಿ ಭಾಷೆಯಲ್ಲಿ ಕೇಳಿದ್ದು ಯುವರಾಜ್ ಮತ್ತು ವಾಲ್ಟನ್ ಇದರ ನಂತರ ನಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋ ವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಯುವರಾಜ್ "ನೈಸ್ ಪಂಜಾಬಿ ಬ್ರೋ. ಹೋಗೋಣ"ಎಂದು ಪಂಜಾಬಿಯಲ್ಲಿ ಬರೆದಿದ್ದಾರೆ.