ಮಾಸ್ಕೋ, ನ 18 (DaijiworldNews/SM): ಗ್ರೀಕ್ ಟೆನಿಸ್ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಅವರು ಟೆನಿಸ್ ಎಟಿಪಿ ಫೈನಲ್ ಗೆದ್ದುಕೊಂಡಿದ್ದಾರೆ. ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರಿಯಾ ಆಟಗಾರ ಡೊಮಿನಿಕ್ ಥೀಮ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಲಂಡನ್ನ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಸಿಟ್ಸಿಪಾಸ್, ಐದನೇ ಶ್ರೇಯಾಂಕದ ಥೀಮ್ ಅವರನ್ನು ಮಣಿಸಿದ್ದಾರೆ. 6-7 (6-8), 6-2, 7-6 (7-4) ರಿಂದ ಡೊಮಿನಿಕ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಆ ಮೂಲಕ ಕ್ರೀಡಾ ಋತುವಿನ ಚಾಂಪಿಯನ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಎಟಿಪಿ ಫೈನಲ್ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡದ ನಾಲ್ಕನೇ ಆಟಗಾರ ಆಗಿದ್ದಾರೆ. ಈ ಹಿಂದೆ 2016 ರಲ್ಲಿ ಆಂಡಿ ಮುರ್ರೆ, 2017 ರಲ್ಲಿ ಗ್ರೆಗರ್ ಡಿಮಿಟ್ರೋವ್ ಮತ್ತು ಕಳೆದ ವರ್ಷ ಅಲೆಕ್ಸಾಂಡರ್ ಜ್ವೆರೆವ್ ಚೊಚ್ಚಲ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು.