ಹಾಂಕಾಂಗ್, ನ.16(Daijiworld News/SS): ಹಾಂಕಾಂಗ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್’ನಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಸೆಮಿಫೈನಲ್’ಗೆ ತಲುಪಿದ್ದಾರೆ.
ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಮೊದಲನೇ ಸೆಟ್’ನಲ್ಲಿ 21-13 ಅಂತರದಲ್ಲಿ ಚೀನಾದ ಚೆನ್ ಲಾಂಗ್ ವಿರುದ್ಧ ಜಯ ಸಾಧಿಸಿದ್ದರು. ಈ ವೇಳೆ ಚೀನಾ ಆಟಗಾರ ಗಾಯದಿಂದಾಗಿ ಪಂದ್ಯವನ್ನು ವಿಥ್’ಡ್ರಾ ಮಾಡಿಕೊಂಡರು. ಇದರ ಲಾಭ ಪಡೆದ ಕಿಡಂಬಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಟೂರ್ನಿಯ ಮೊದಲನೇ ಸುತ್ತಿನಲ್ಲೇ ವಿಶ್ವದ ಅಗ್ರ ಶ್ರೇಯಾಂಕಿತ ಕೆಂಟೊ ಮೊಮೊಟಾ ಅವರ ವಿರುದ್ಧ ಸೆಣಸಬೇಕಾಗಿತ್ತು. ಆದರೆ, ಅವರು ಅನಿರೀಕ್ಷಿತವಾಗಿ ವಿಥ್’ಡ್ರಾ ಮಾಡಿಕೊಂಡಿದ್ದರು. ಹೀಗಾಗಿ, ಕಿಡಂಬಿ ಶ್ರೀಕಾಂತ್ ಅವರು ಸೆಮಿಫೈನಲ್’ಗೆ ಸುಲಭವಾಗಿ ತಲುಪಲು ಸಾಧ್ಯವಾಗಿದೆ.