ಧೋಹಾ, ನ 10 (DaijiworldNews/SM): ಭಾರತೀಯ ಮೂಲದ ಮತ್ತೊಬ್ಬರು ಆಟಗಾರ್ತಿ ಧೋಹಾದಲ್ಲಿ ನಡೆಯುವ 14 ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ವನಿತಾ ವಿಭಾಗದಲ್ಲಿ ತೇಜಸ್ವಿನಿ ಸಾವಂತ್ ಈ ಅರ್ಹತೆ ಪಡೆದುಕೊಂಡವರು. ಈ ಹಿಂದೆ ದೇಶದ ಕೀರ್ತಿ ಪತಾಕೆಯನ್ನು ತೇಜಸ್ವಿನಿ ಉತ್ತುಂಗಕ್ಕೆ ಏರಿಸಿದ್ದರು.
ಇದೀಗ 50 ಮೀ ರೈಫಲ್-3 ವಿಭಾಗದಲ್ಲಿ ಫೈನಲ್ಗೆ ಅರ್ಹತೆ ಪಡೆಯುವ ಮೂಲಕ ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇವರು ಶೂಟಿಂಗ್ ನಲ್ಲಿ ಒಲಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡ ಹನ್ನೆರಡನೇ ಆಟಗಾರ್ತಿಯಾಗಿದ್ದಾರೆ. 39ರ ಹರೆಯದ ಸಾವಂತ್ 1171 ಅಂಕ ಪಡೆದುಕೊಂಡಿದ್ದಾರೆ. ಆ ಮೂಲಕ ಐದನೇ ಸ್ಥಾನ ಗಳಿಸಿದ್ದಾರೆ. ಹಾಗೂ ಟೋಕಿಯೊ ಒಲಂಪಿಕ್ಸ್ ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. 2020ರಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ಸಾವಂತ್ ಭಾಗವಹಿಸಲಿದ್ದಾರೆ. ಇನ್ನು ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸಾವಂತ್ ಅವರು ನಿರಂತರ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
2006ರಲ್ಲಿ ಮೆಲ್ಬೋರ್ನ್ ನಲ್ಲಿ 2 ಚಿನ್ನಗೆದ್ದ ಕೀರ್ತಿ ತೇಜಸ್ವಿನಿಗೆ ಸಲ್ಲುತ್ತದೆ. ಅಲ್ಲದೆ, 2018ರಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.