ದೆಹಲಿ, ಅ 29 (DaijiworldNews/SM): ಕ್ರಿಕೆಟ್ ಇತಿಹಾಸದಲ್ಲೇ ಬಿಸಿಸಿಐ ಮಹತ್ವದ ಹೆಜ್ಜೆಯೊಂದನ್ನಿರಿಸಿದೆ. ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕ್ಕೆ ಬಿಸಿಸಿಐ ಮುಂದಾಗಿದೆ.
ಈ ಹಿಂದೆ ಟೆಸ್ಟ್ ಕ್ರಿಕೆಟ್ ಪಂದ್ಯಗಳು ಐದು ದಿನಗಳು ನಡೆಯುವಂತಹ ಪಂದ್ಯವಾಗಿದ್ದು ದಿನವೊಂದಕ್ಕೆ 90 ಓವರ್ ಗಳ ಪಂದ್ಯ ನಡೆಯುತ್ತದೆ. ಇಲ್ಲಿಯ ತನಕ ಹಗಲು ಹೊತ್ತಿನಲ್ಲಿ ಮಾತ್ರವೇ ಪಂದ್ಯಗಳು ನಡೆಯುತ್ತಿದ್ದವು. ಆದರೆ, ಇನ್ನು ಮುಂದೆ ಒಂದಿಷ್ಟು ಬದಲಾವಣೆ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.
ಬಾಂಗ್ಲಾದೇಶದ ವಿರುದ್ಧ ನಡೆಯುವಂತಹ ಪಂದ್ಯದಲ್ಲೇ ಈ ಹೊಸ ಪದ್ಧತಿಯಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ನವಂಬರ್ ೧೪ರಿಂದ ಮೊದಲ ಟೆಸ್ಟ್ ಪಂದ್ಯ ಇಂದೋರ್ ನಲ್ಲಿ ನಡೆಯಲಿದ್ದು, ಕೊಲ್ಕತ್ತಾದಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಹೊನಲು ಬೆಳಕಿನ ಸರಣಿಯನ್ನು ಆಯೋಜನೆ ಮಾಡಲಾಗಿದೆ. ಕೊಲ್ಕತ್ತಾದ ಇಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೊಸ ಪದ್ಧತಿಯಂತೆ ಪಂದ್ಯ ನಡೆಯಲಿದೆ.
ಇನ್ನು ಬಿಸಿಸಿಐಗೆ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆಯಾದ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.