ನವದೆಹಲಿ, ಅ 27 (DaijiworldNews/SM): ಟೆಸ್ಟ್ ಪಂದ್ಯಗಳಿಗೆ ಕೇವಲ ಐದು ಕೇಂದ್ರಗಳನ್ನು ನಿಗದಿಪಡಿಸಬೇಕೆಂದು ವಿರಾಟ್ ಕೊಹ್ಲಿಯವರ ಸಲಹೆಯನ್ನು ಇದೀಗ ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಮರ್ಥಿಸಿದ್ದಾರೆ.
1980 ಹಾಗೂ 90ರ ದಶಕದಲ್ಲಿ ಟೆಸ್ಟ್ ಪಂದ್ಯಗಳಿಗೆ ನಿಗದಿಪಡಿಸುತ್ತಿದ್ದ ವಿಶೇಷ ಕೇಂದ್ರಗಳ ರೀತಿಯಲ್ಲೇ ಇಂದು ಕೂಡ ಅದೇ ಸಾಂಪ್ರದಾಯವನ್ನು ಬಿಸಿಸಿಐ ಅನುಸರಿಸಬೇಕಾದ ಅಗತ್ಯವಿದೆ ಎಂದಿದ್ದಾರೆ. ಈ ಹಿಂದೆ ಹೊಸ ವರ್ಷದ ದಿನಗಳಲ್ಲಿ ಕೊಲ್ಕತ್ತಾ ಹಾಗೂ ಪೊಂಗಲ್ ಸಮಯದಲ್ಲಿ ಚೆನ್ನೈ ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸಿ ಮಾನೋರಂಜನೆ ನೀಡಲಾಗುತ್ತಿತ್ತು. ಅಭಿಮಾನಿಗಳು ಅಂಗಣದತ್ತ ತೆರಳಿ ಸಕ್ಕತ್ ಎಂಜಾಯ್ ಮಾಡುತ್ತಿದ್ದರು. ಹಾಗೂ ಟೆಸ್ಟ್ ಕ್ರಿಕೆಟ್ ನತ್ತ ಅಭಿಮಾನಿಗಳನ್ನು ಸೆಳೆಯಲು ಇದೊಂದು ಉತ್ತಮ ಮಾರ್ಗವೂ ಕೂಡ ಆಗಿದೆ.
ದೇಶದಲ್ಲಿ ಕೆಲವೇ ಕೆಲವು ಕೇಂದ್ರಗಳನ್ನು ಆಯ್ಕೆ ಮಾಡುವ ಬದಲು ನಿಯಮಿತ ಕೇಂದ್ರಗಳನ್ನು ನಿರ್ದಿಷ್ಟ ಸಮಯದಲ್ಲಿ ಆಯ್ಕೆ ಮಾಡುವುದರಿಂದ ಟೆಸ್ಟ್ ಪಂದ್ಯಕ್ಕೆ ಸಹಕಾರ ಇನ್ನಷ್ಟು ಸಿಗಲಿದೆ ಎಂದು ಮಾಜಿ ಕ್ರಿಕೆಟಿಗ ಕುಂಬ್ಳೆ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಅನ್ನೂ ಹೆಚ್ಚು ಪ್ರಚಾರ ಪಡೆಯಲು ದೇಶದಲ್ಲಿ ಐದು ಕೇಂದ್ರಗಳನ್ನು ಗುರುತಿಸುವುದು ಅತ್ಯಂತ ಮುಖ್ಯವಾಗಿದೆ. ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ಸೇರಿ ಒಟ್ಟು ಐದು ಕೇಂದ್ರಗಳನ್ನು ಆಯ್ಕೆ ಮಾಡುವುದರಿಂದ ಈ ನಗರಗಳಲ್ಲಿ ಹೆಚ್ಚು ಜನ ಕ್ರಿಕೆಟ್ ನೋಡಲು ಸಾಧ್ಯವಾಗುತ್ತದೆ. ಇದರಿಂದ ಟೆಸ್ಟ್ ಕ್ರಿಕೆಟ್ಗೆ ಹೆಚ್ಚು ಪ್ರಚಾರ ಸಿಗುತ್ತದೆ ಎಂದು ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.