ನವದೆಹಲಿ, ಅ.26(Daijiworld News/SS): ತಂದೆ ನನ್ನ ಸೂಪರ್ ಹೀರೋ ಆಗಿದ್ದಾರೆ. ಅವರ ವ್ಯಕ್ತಿತ್ವ ಮತ್ತು ನಿರ್ಧಾರಗಳಿಂದಾಗಿ, ನನ್ನ ವೃತ್ತಿಜೀವನದ ಹಾದಿ ಸರಳವಾಯಿತು. ನಾನು ಕಷ್ಟಪಟ್ಟು ದುಡಿಯುವುದರಿಂದ ಮಾತ್ರ ಮುಂದುವರಿಯಬೇಕಾಗಿತ್ತು. ಆಗ ನಾನು ಸಾಕಷ್ಟು ಒಳ್ಳೆಯವನಾಗಿರಲಿಲ್ಲ. ಆದರೆ ಅವರ ಕಾರಣದಿಂದ ನಾನಿಂದು ಹೀಗೆ ಬದಲಾಗಿದ್ದೇನೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿಜ ಜೀವನದಲ್ಲಿ ನನ್ನ ತಂದೆ ನನ್ನ ಹೀರೋ. ಇವರು ಮಹತ್ವದ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲು ನೆರವಾಗಿದೆ. ಈ ಜೀವನದಲ್ಲಿ ಇಂದಿಗೂ ಅವರೇ ನನ್ನ ಹೀರೋ. ಹಲವು ಆಟಗಾರರು ನಿಮ್ಮನ್ನು ಪ್ರೇರಣೆ ಮಾಡಬಹುದು. ನಿಮ್ಮ ಮುಂದೆ ನಿಮ್ಮ ಜೀವನದ ನಿಜ ಉದಾಹರಣೆ ನೀಡಿದರೆ ಅದು ವಿಶೇಷವಾಗಿರುತ್ತದೆ ಎಂದು ತಿಳಿಸಿದ್ದಾರೆ.
ತಂದೆ ನನಗೆ ವಿಭಿನ್ನ ಆಯಾಮಗಳ ಬಗ್ಗೆ ಹೇಳಬಹುದಿತ್ತು. ಅವರ ವ್ಯಕ್ತಿತ್ವ ಮತ್ತು ನಿರ್ಧಾರಗಳಿಂದಾಗಿ, ನನ್ನ ಗಮನವು ಯಾವಾಗಲೂ ಒಂದೇ ಕಡೆ ಕೇಂದ್ರೀಕೃತವಾಗಿತ್ತು. ನಾನು ಕಠಿಣ ಪರಿಶ್ರಮದಿಂದ ಮುಂದುವರಿಯುವೆ ಹೊರತು ಬೇರಾವ ಮಾರ್ಗದಿಂದಲ್ಲ ಎಂದು ಕೊಹ್ಲಿ ಹೇಳಿದ್ದಾರೆ.