ವಿಶಾಖಪಟ್ಟಣಂ, ಅ 07 (DaijiworldNews/SM): ಹಲವು ಸಮಯದ ವಿಶ್ರಾಂತಿಯ ಬಳಿಕ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಂಡಕ್ಕೆ ಮರಳಿದ್ದು, ಮತ್ತೆ ತಮ್ಮ ಸಾಮಾರ್ಥ್ಯ ಪ್ರದರ್ಶಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಗೆಲುವಿಗೆ ಅಶ್ವಿನ್ ಕೊಡುಗೆ ಕೂಡ ಇದೆ. ಈ ನಡುವೆ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳಿಧರ್ ಅವರ ದಾಖಲೆಯನ್ನು ಕೂಡ ಸರಿಗಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತಿ ವೇಗವಾಗಿ 350 ವಿಕೆಟ್ಗಳನ್ನು ಪಡೆದಿದ್ದು, ಈ ಹಿಂದೆ ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರ್ ಅವರ ದಾಖಲೆಯನ್ನು ಮಾಡಿದ್ದರು. ಥ್ಯೂನಿಸ್ ಡಿ ಬ್ರೂಯಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅಶ್ವಿನ್ ಈ ದಾಖಲೆ ನಿರ್ಮಿಸಿದ್ದಾರೆ.
ಈ ಸಾಧನೆ ಮಾಡಲು ಆರ್. ಅಶ್ವಿನ್ ಗೆ 66 ಪಂದ್ಯಗಳು ಹಾಗೂ 124 ಇನಿಂಗ್ಸ್ಗಳು ಬೇಕಾಯಿತು. ಮುತ್ತಯ್ಯ ಮುರಳಿಧರ್ ಅವರು 2001ರಲ್ಲಿ ಬಾಂಗ್ಲಾದೇಶ ವಿರುದ್ಧದ 66ನೇ ಪಂದ್ಯದಲ್ಲಿ 350 ವಿಕೆಟ್ ಪಡೆದಿದ್ದರು. ಆದರೆ, ಅವರು 66 ಪಂದ್ಯಗಳು ಹಾಗೂ 106 ಇನ್ನಿಂಗ್ಸ್ ಸಹಾಯದಿಂದ ಈ ಸಾಧನೆ ಮಾಡಿದ್ದರು. ಇನ್ನು ಈ ಸಾಧನೆಯ ಸಂದರ್ಭ ಮುರಳೀಧರ್ 28 ಬಾರಿ 5 ವಿಕೆಟ್ ಪಡೆದಿದ್ದಾರೆ. ಹಾಗೂ 7 ಬಾರಿ 10 ವಿಕೆಟ್ ಗಳನ್ನು ಪಡೆದಿದ್ದಾರೆ. ಅಶ್ವಿನ್ ಕೂಡ 27 ಸಲ 5 ವಿಕೆಟ್ ಗಳನ್ನು ಪಡೆದಿದ್ದಾರೆ. ಹಾಗೂ 7 ಬಾರಿ 10 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಮುರಳಿಧರನ್ ಅವರು ತನ್ನ ವೃತ್ತಿ ಜೀವನದಲ್ಲಿ ಒಟ್ಟು 800 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.