ಬೆಂಗಳೂರು, ಸೆ 23(DaijiworldNews/SM): ದ.ಆಫ್ರಿಕಾ ವಿರುದ್ಧದ ಮೂರನೇ ಟಿ-೨೦ ಪಂದ್ಯವನ್ನು ಭಾರತ ಕೈಚೆಲ್ಲಿದೆ. ಆ ಮೂಲಕ ಸರಣಿ ಸಮಬಲದಲ್ಲಿ ಕೊನೆಗೊಂಡಿದೆ.
ಈ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ನಾಯಕ ಕೊಹ್ಲಿ ಬೇಡದ ಡಿ ಆರ್ ಎಸ್ ತೆಗೆದುಕೊಂಡು ಕೈ ಸುಟ್ಟುಕೊಂಡಿದ್ದಾರೆ. ಇದುವೆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಕಾರಣ ಎನ್ನಲಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ನಿರ್ಣಾಯಕ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 9 ವಿಕೆಟ್ ಗಳಿಂದ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ದೀಪಕ್ ಚಹಾರ್ ಮಾತು ಕೇಳಿ ಕೊಹ್ಲಿ ಮಾಡಿದ ಆ ಒಂದು ಎಡವಟ್ಟು ಕೊನೆಗೆ ಪಂದ್ಯ ಕೈಚೆಲ್ಲುವಂತಾಯಿತು. ಈ ಡಿ ಆರ್ ಎಸ್ ತೆಗೆದುಕೊಂಡ ಬಳಿಕ ಮತ್ತೊಂದು ಎಲ್ ಬಿ ಡಬ್ಲ್ಯುವೊಂದನ್ನು ನಾಯಕ ಕೊಹ್ಲಿ ಕೈಚೆಲ್ಲಿದ್ದಾರೆ.
ದೀಪಕ್ ಚಹಾರ್ ಎಸೆತ ಹೆಂಡ್ರಿಕ್ ಪ್ಯಾಡ್ ಗೆ ಬಿದ್ದಿದ್ದು ಈ ವೇಳೆ ಚಹಾರ್ ಅಪೀಲ್ ಮಾಡಿದ್ದಾರೆ. ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ಚಹಾರ್ ಬಿಡದೆ ಇದು ಔಟ್ ಎಂದೇ ಕೊಹ್ಲಿಯವರನ್ನು ಒತ್ತಾಯಿಸಿದಾಗ ಅವರು, ಡಿಆರ್ಎಸ್ ಗೆ ಮನವಿ ಮಾಡಿದರು. ದೃಶ್ಯಗಳನ್ನು ಪರಿಶೀಲಿಸಿದ ಮೂರನೇ ಅಂಪೈರ್ ಇದು ನಾಟೌಟ್ ಎಂದು ತೀರ್ಪು ನೀಡಿದರು. ಇದರಿಂದ ಮತ್ತೊಂದು ಅಪಿಲ್ ಗೆ ಅವಕಾಶವಿಲ್ಲದೆ, ನೈಜ ಔಟ್ ಆಗಿರುವ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ.
ಆ ಮೂಲಕ ಟೀಂ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಅನುಪಸ್ಥಿತಿ ಎದ್ದು ಕಾಣುತ್ತಿದೆ.