ಮೊಹಾಲಿ, ಸೆ 19 (DaijiworldNews/SM): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಕಾಯ್ದುಕೊಂಡಿದೆ. ನಾಯಕ ವಿರಾಟ್ ಕೊಹ್ಲಿಯವರ ಅರ್ಧ ಶತಕದನೆರವಿನಿಂದ ಟೀಂ ಇಂಡಿಯಾ ಸುಲಭವಾಗಿ ಗುರಿ ಮುಟ್ಟಿದೆ.
ಮೊಹಾಲಿ ಅಂಗಳದಲ್ಲಿ ನಡೆದ ಟಿ-20 ಎರಡನೇ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿತು. ಆ ಮೂಲಕ ಭಾರತಕ್ಕೆ 150 ರನ್ ಗುರಿ ನೀಡಿತು. ಸೌತ್ ಆಫ್ರಿಕಾ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ನೆರವಾದರು.
ಭರ್ಜರಿಯಾಗಿ ಬ್ಯಾಟ್ ಬೀಸಿದ ನಾಯಕ ಕೊಹ್ಲಿ (ಅಜೇಯ 72) ಅರ್ಧ ಶತಕ ಸೀಡಿಸಿದರೆ, ಶಿಖರ್ 40ಗಳ ಕೊಡುಗೆ ನೀಡಿದರು. ಆ ಮೂಲಕ ಇನ್ನೂ ಆರು ಎಸೆತಗಳು ಉಳಿದಿರುವಾಗ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 151 ರನ್ ಪೇರಿಸಿದ 7 ವಿಕೆಟ್ ಗಳಿಂದ ಗೆಲುವು ಸಾಧಿಸಿತು.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಪಂದ್ಯ ಗೆದ್ದುಕೊಂಡು ಮೂರನೇ ಪಂದ್ಯವನ್ನೂ ಕೂಡ ಗೆದ್ದು ಸರಣಿ ವಶಪಡಿಸುವ ಹುಮ್ಮಸ್ಸಿನಲ್ಲಿ ಟೀಂ ಇಂಡಿಯಾ ಇದೆ.