ಮುಂಬಯಿ, ಸೆ 09 (DaijiworldNews/SM): ಈಗಾಗಲೇ ಟೀಂ ಇಂಡಿಯಾಕ್ಕೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಆದರೆ, ಇದೀಗ ಅವರ ಸಂಭಾವನೆ ಹೆಚ್ಚಾಗಿದೆ.
ಭಾರತ ಕ್ರಿಕೆಟ್ ತಂಡದ ತರಬೇತುದಾರ ಸ್ಥಾನ ಉಳಿಸಿಕೊಂಡಿರುವ ರವಿಶಾಸ್ತ್ರಿ ಅವರ ವಾರ್ಷಿಕ ವೇತನ ಈ ಬಾರಿ ಬರೋಬ್ಬರಿ 10 ಕೋಟಿ ರೂ.ಗಳಿಗೆ ಏರಿದೆ. ಈ ಹಿಂದೆ 8 ಕೋಟಿ ರೂಪಾಯಿ ಸಂಭಾವನೆಯನ್ನು ಅವರು ಪಡೆಯುತ್ತಿದ್ದರು. ಆದರೆ, ಈ ಸಲ 2 ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿದೆ. ಪ್ರಮುಖ ವಿಚಾರವೆಂದರೆ, ವಿಶ್ವದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಕೋಚ್ ಭಾರತೀಯ ಕೋಚ್ ಆಗಿದ್ದಾರೆ.
ಬೇರೆ ಯಾವುದೇ ರಾಷ್ಟ್ರದ ಕೋಚ್ ಗೂ ಕೂಡ ಇಷ್ಟರ ಮಟ್ಟದಲ್ಲಿ ಸಂಭಾವನೆ ನೀಡಲಾಗುತ್ತಿಲ್ಲ. ಇನ್ನು ರವಿಶಾಸ್ತ್ರಿ ಜತೆಗೆ ಇತರ ಸಹಾಯಕ ಸಿಬ್ಬಂದಿಗಳ ವೇತನವನ್ನೂ ಕೂಡ ಹೆಚ್ಚಿಸಲಾಗಿದೆ. ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್, ಬೌಲಿಂಗ್ ಕೋಚ್ ಭರತ್ ಅರುಣ್ ವೇತನ 3.5 ಕೋಟಿ ರೂ.ಗೇರಿದೆ.
ಇಂತಹ ಸಂಭಾವನೆ ಇರುವ ಹಿನ್ನೆಲೆಯಲ್ಲಿ ಈ ಹುದ್ದೆಗೆ ಸಾಕಷ್ಟು ಪೈಪೋಟಿ ನಡೆದಿತ್ತು.