ಮ್ಯಾಂಚೆಸ್ಟರ್, ಸೆ 6 (DaijiworldNews/SM): ಇಲ್ಲಿನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಹೊಸ ದಾಖಲೆ ಬರೆದಿದ್ದಾರೆ. ಇಲ್ಲಿಯ ತನಕ ಕ್ರಿಕೆಟ್ ದೇವರು ಸಚಿನ್ ಹೆಸರಲ್ಲಿದ್ದ ದಾಖಲೆಯನ್ನು ಸ್ಮಿತ್ ಪುಡಿಗೈದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 26 ನೇ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ಅವರ ಹೆಸರಲ್ಲಿದ್ದ ದಾಖಲೆಯನ್ನು ಹಿಮ್ಮೆಟ್ಟಿಸಿ ಹೆಸರಿಗೆ ಬರೆದುಕೊಂಡಿದ್ದಾರೆ ಸ್ಮಿತ್.
ಇತ್ತೀಚಿಗೆ ಉತ್ತಮ ಫಾರ್ಮ್ ನಲ್ಲಿರುವ ಸ್ಮಿತ್ 121 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ ಈ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ಅತಿ ವೇಗವಾಗಿ 26ನೇ ಶತಕ ಪೂರೈಸಿದ ವಿಶ್ವದ ಎರಡನೇ ಬ್ಯಾಟ್ಸ್ ಮನ್ ಎಣಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಡಾನ್ ಬ್ರ್ಯಾಡ್ ಮನ್ ಇದ್ದು ಕೇವಲ 69 ಇನ್ನಿಂಗ್ಸ್ ನಲ್ಲಿ ಈ ದಾಖಲೆ ಬರೆದಿದ್ದಾರೆ.ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಸಚಿನ್ ತೆಂಡೂಲ್ಕರ್ 136 ಇನ್ನಿಂಗ್ಸ್ ನಲ್ಲಿ ಈ ಸಾಧನೆಗೈದಿದ್ದರು. ಸಚಿನ್ ಅವರ ಹೆಸರಲ್ಲಿದ್ದ ಈ ದಾಖಲೆಯನ್ನು ಸ್ಮಿತ್ ತನ್ನದಾಗಿಸಿಕೊಂಡಿದ್ದಾರೆ. ಹಾಗೂ ತೆಂಡೂಲ್ಕರ್ ಅವರನ್ನು ಮೂರನೇ ಸ್ಥಾನಕ್ಕೆ ಇಳಿಸಿದ್ದಾರೆ.
ಸಚಿನ್ ಬಳಿಕದ ಸ್ಥಾನದಲ್ಲಿ ಸುನಿಲ್ ಗವಾಸ್ಕರ್ (144 ), ಮ್ಯಾಥ್ಯೂ ಹೇಡನ್ (145 ) ಅವರು ಸ್ಥಾನ ಹೊಂದಿದ್ದಾರೆ.