ಜಮೈಕಾ, ಆ 30 (DaijiworldNews/SM): ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ವಿಂಡೀಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿದೆ.
ಇಬ್ಬರು ಆರಂಭಿಕರನ್ನು ಟೀಂ ಇಂಡಿಯಾ ಬೇಗನೇ ಕಳೆದುಕೊಂಡಿದೆ. ಕೇವಲ 6 ರನ್ ಗಳಿಸಿ ಚೇತೇಶ್ವರ್ ಪೂಜಾರ ವಿಕೆಟ್ ಒಪ್ಪಿಸಿದರೆ, 13 ರನ್ ಗಳಿಸಿದ್ದ ಲೋಕೇಶ್ ರಾಹುಲ್ ಕೂಡ ಫೆವೀಲಿಯನ್ ಹಾದಿ ಹಿಡಿದಿದ್ದಾರೆ.
ಇನ್ನು ಆರಂಭಿಕ ಆಘಾತ ಅನುಭವಿಸಿರುವ ಭಾರತಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ನೆರವಾಗಿದ್ದಾರೆ. ಇನ್ನು ಮಯಾಂಕ್ ಗೆ ನಾಯಕ ವಿರಾಟ್ ಕೊಹ್ಲಿ ಸಾಥ್ ನೀಡುತ್ತಿದ್ದಾರೆ. ಈ ಜೋಡಿಯ ಮೇಲೆ ಹೆಚ್ಚಿನ ವಿಶ್ವಾಸವನ್ನಿಡಲಾಗಿದೆ. ಇತ್ತೀಚಿನ ವರದಿಗಳು ಬಂದಾಗ ಭೋಜನ ವಿರಾಮದ ಹೊತ್ತಿಗೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತ್ತು. ಭೋಜನ ವಿರಾಮದ ಬಳಿಕ ಮತ್ತೆ ಪಂದ್ಯ ಮುಂದುವರೆಯಲಿದೆ.