ವೆಸ್ಟ್ ಇಂಡೀಸ್, ಆ 26 (DaijiworldNews/SM): ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿಕೊಂಡಿದೆ. ಈ ಪಂದ್ಯದಲ್ಲಿ ಮಿಂಚಿರುವುದು ಬೂಮ್ರಾ. ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ವೆಸ್ಟ್ ಇಂಡೀಸ್ ತಂಡ ಪರದಾಡುವಂತಾಯಿತು.
ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 55 ರನ್ ಗಳನ್ನು ನೀಡಿ 1 ವಿಕೆಟ್ ಕಬಳಿಸಿದ್ದರು. ಟೀಂ ಇಂಡಿಯಾ ಪರ ದುಬಾರಿ ಬೌಲರ್ ಎನಿಸಿಕೊಂಡರು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ತಂಡದ ನಾಯಕ ಹಾಗೂ ಕ್ರಿಕೆಟ್ ಅಭಿಮಾನಿಗಳು ತನ್ನ ಮೇಲೆ ಇರಿಸಿದ್ದ ನಂಬಿಕೆಯನ್ನು ಉಳಿಸಿದ್ದಾರೆ.
ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 48 ಎಸೆತಗಳನ್ನು ಮಾತ್ರವೇ ಎಸೆದಿದ್ದಾರೆ. ಈ ಪೈಕಿ ಮೂರು ಓವರ್ ಗಳಲ್ಲಿ ಯಾವುದೇ ರನ್ ನೀಡಿಲ್ಲ. ಬದಲಿಗೆ ಅವರು ನೀಡಿರುವ ಒಟ್ಟು ರನ್ 7 ಮಾತ್ರ. ಆದ್ರೆ ಕಬಳಿಸಿದ್ದು 5 ವಿಕೆಟ್ ಗಳನ್ನು. ಆ ಮೂಲಕ ಬೂಮ್ರಾ ಅವರು ವೆಸ್ಟ್ ಇಂಡೀಸ್ ಅಂಗಳದಲ್ಲಿ ಕಮಾಲ್ ಮಾಡಿದ್ದಾರೆ.
ತಾನು ಏಕದಿನ ಮಾತ್ರವಲ್ಲ ಟೆಸ್ಟ್ ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲೇ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಭಾರತದ ಬೌಲಿಂಗ್ ವಿಭಾಗ ಇತ್ತೀಚಿನ ದಿನಗಳಲ್ಲಿ ಬಲಿಷ್ಟಗೊಳ್ಳುತ್ತಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಮಾತ್ರ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಎರಡೂ ವಿಭಾಗಗಳಲ್ಲಿ ಸಂಘಟನಾತ್ಮಕ ಹೋರಾಟದ ಅಗತ್ಯವಿದೆ.