ಸ್ವಿಜರ್ಲ್ಯಾಂಡ್, ಆ 26 (DaijiworldNews/SM): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮತ್ತೆ ಮಿಂಚಿದ್ದಾರೆ. ಬಸೆಲ್ನಲ್ಲಿ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ವನಿತಾ ಸಿಂಗಲ್ಸ್ ನಲ್ಲಿ ಸಿಂಧು ಚಿನ್ನ ಮುಡಿಗೇರಿಸಿಕೊಂಡಿದ್ದಾರೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಜಪಾನಿನ ವಿಶ್ವಶ್ರೇಷ್ಠ ಆಟಗಾರ್ತಿ ನೊಜೊಮಿ ಒಕುಹಾರಾ ಅವರನ್ನು ಪಿ.ವಿ. ಸಿಂಧು ಭಾರೀ ಅಂತರದಿಂದ ಸೋಲಿಸಿದರು. ನೊಜೊಮಿ ಅವರನ್ನು 21-7, 21-7 ಅಂತರದಿಂದ ಸುಲಭದಲ್ಲಿ ಮಣಿಸಿ ಸ್ವರ್ಣ ಕಿರೀಟ ಅಲಂಕರಿಸಿದರು. ಆ ಮೂಲಕ 2017ರ ಫೈನಲ್ ಪಂದ್ಯದಲ್ಲಿನ ಸೋಲಿಗೆ ಪ್ರತಿಕಾರ ತೀರಿಸಿಕೊಂಡರು. ಇದೇ ಆಟಗಾರ್ತಿ 2017ರಲ್ಲಿ ಪಿ.ವಿ. ಸಿಂಧು ಅವರ ಚಿನ್ನ ಗೆಲ್ಲುವ ಆಸೆಗೆ ತನ್ನಿರೆರಚಿದ್ದರು.
ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದ ಭಾರತದ ಮೊದಲ ಸಾಧಕಿ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. ಇದು ವಿಶ್ವ ಚಾಂಪಿಯನ್ಶಿಪ್ನಲ್ಲಿ ಸಿಂಧು ಈ ಬಾರಿ ಸಿಂಧು ಅತ್ಯಧಿಕ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಗೆದ್ದ ಸರ್ವಾಧಿಕ 5 ಪದಕಗಳ ಜಂಟಿ ದಾಖಲೆ. ಇದಕ್ಕೂ ಮೊದಲು 2 ಕಂಚು, 2 ಬೆಳ್ಳಿ ಜಯಿಸಿದ್ದರು.