ಮುಂಬೈ, ಆ 16 (Daijiworld News/SM): ಟೀಂ ಇಂಡಿಯಾದ ಕೋಚ್ ಆಗಿ ರವಿಶಾಸ್ತ್ರಿ ಪುನರಾಯ್ಕೆಗೊಂಡಿದ್ದಾರೆ. ತಂಡದ ಸಂದರ್ಶನ ಮುಕ್ತಾಯಗೊಂಡಿದ್ದು, ತಂಡಕ್ಕೆ ಮತ್ತೊಂದು ಅವಧಿಗೆ ಕೋಚ್ ಆಗಿ ಆಯ್ಕೆಗೊಂಡಿದ್ದಾರೆ.
ಮುಂಬೈನಲ್ಲಿ ಶುಕ್ರವಾರ ನಡೆಸಲಾದ ಸಂದರ್ಶನದ ಬಳಿಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಹೊಸ ಕೋಚ್ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ತಂಡದ ಕೋಚ್ ಹುದ್ದೆಗಾಗಿ ಕಳೆದ ಒಂದು ತಿಂಗಳಿನಿಂದ ಆಯ್ಕೆ ಪ್ರಕ್ರಿಯೆಗಳು ನಡೆದಿದ್ದವು. ಹಲವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಅಂತಿಮವಾಗಿ ಇದೀಗ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಿದೆ. ಈ ವೇಳೆ ಆರು ಜನ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಆದರೆ ಅಫ್ಘಾನಿಸ್ತಾನದ ಮಾಜಿ ಕೋಚ್ ಸಿಮನ್ಸ್ ರೇಸ್ನಿಂದ ಪ್ರಮುಖರಾಗಿ ಹೊರಬಿದ್ದಿದ್ದರು.
ಉಳಿದಂತೆ ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್ಚಂದ್ ರಜಪೂತ್, ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ ಶ್ರೀಲಂಕಾ ಕೋಚ್ ಟಾಮ್ ಮೂಡಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಕಪಿಲ್ ದೇವ್ ಅವರನ್ನೇ ಪುನರಾಯ್ಕೆ ಮಾಡಲಾಗಿದೆ.
ಟೀಂ ಇಂಡಿಯಾ ತಂಡಕ್ಕೆ ಆಯ್ಕೆಗೊಂಡಿರುವ ಕೋಚ್ ಮುಂದಿನ 2021ರ ಐಸಿಸಿ ಟಿ-20 ವಿಶ್ವಕಪ್ವರೆಗೆ ಮಾತ್ರ ಟೀಂ ಇಂಡಿಯಾ ತಂಡದ ಕೋಚ್ ಆಗಿರಲಿದ್ದಾರೆ ಬಳಿಕ ಮತ್ತೊಂದು ಅವಧಿಗೆ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ತೀರ್ಮಾನ ಕೈಗೊಂಡಿದೆ.