ವೆಸ್ಟ್ ಇಂಡೀಸ್, ಆ 12 (DaijiworldNews/SM): ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ೨ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಟೀಂ ಇಂಡಿಯಾ 59 ರನ್ ಗಳ ಭರ್ಜರಿ ಗೆಲುವನ್ನು ದಾಖಲಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ 280 ರನ್ ಗಳ ಗುರಿ ನಿಗದಿಪಡಿಸಿತು. ಪಂದ್ಯಕ್ಕೆ ಮಳೆ ಅಡ್ಡಿ ಆದ ಕಾರಣ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಯಿತು. ವೆಸ್ಟ್ ಇಂಡೀಸ್ ತಂಡಕ್ಕೆ 46 ಓವರ್ ಗಳಲ್ಲಿ 270 ರನ್ ಗಳ ಗುರಿ ನೀಡಲಾಯಿತು.
270 ರನ್ ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಕ್ರಿಸ್ ಗೇಲ್ ಹಾಗೂ ಎವಿನ್ ಲೂಯಿಸ್ 45 ರನ್ ಗಳ ಜೊತೆಯಾಟ ಆಡಿದರು. 10 ನೇ ಓವರ್ ನಲ್ಲಿ ಕ್ರಿಸ್ ಗೇಲ್ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.
18.4 ಓವರ್ ವೇಳೆಗೆ ವೆಸ್ಟ್ ಇಂಡೀಸ್ 122 ರನ್ ಗಳನ್ನು ಗಳಿಸಬೇಕಿದ್ದರೆ ಭಾರತಕ್ಕೆ ಪಂದ್ಯ ಗೆಲ್ಲಲು 6 ವಿಕೆಟ್ ಗಳ ಅಗತ್ಯವಿತ್ತು. ಆದರೆ 35 ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಪೂರನ್ ಅವರನ್ನು ಪೆವಿಲಿಯನ್ ಗೆ ಕಳಿಸಿದರು. ಬಳಿಕ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿತು.
ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ ಟೀಂ ಇಂಡಿಯಾ ವಿರುದ್ಧ 59 ರನ್ ಗಳ ಸೋಲು ಅನುಭವಿಸಿತು.