ನವದೆಹಲಿ, ಆ 06 (DaijiworldNews/SM): ಟೀಂ ಇಂಡಿಯಾದಲ್ಲಿ ಭರ್ಜರಿ ಫಾರ್ಮನಲ್ಲಿರುವ ರೋಹಿತ್ ಶರ್ಮಾ ಪರವಾಗಿ ತಂಡದ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಬ್ಯಾಟ್ ಬೀಸಿದ್ದಾರೆ.
ರಾಹುಲ್ ದ್ರಾವಿಡ್ ಅಥವಾ ಸಚಿನ್ ತೆಂಡೂಲ್ಕರ್ ಅವರಂತಹ ಟೆಸ್ಟ್ ತಜ್ಞರು ಮೆಂಟರ್ ಆದರೆ, ರೋಹಿತ್ ವಿಶ್ವಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಆಗಲಿದ್ದಾರೆ ಎಂದರು. ಇತ್ತೀಚೆಗಷ್ಟೇ ಮುಗಿದ ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಸರಣಿಯ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಮಾತ್ರವಲ್ಲದೆ, ಹಲವಾರು ದಾಖಲೆಗಳನ್ನು ಬರೆದಿದ್ದರು. 9 ಪಂದ್ಯಗಳಿಂದ 5 ಸೆಂಚುರಿ ಸಹಿತ 648 ರನ್ಗಳಿಸಿದ್ದರು.
ಪ್ರಸ್ತುತ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಎರಡು ಪಂದ್ಯಗಳಲ್ಲೂ ಭಾರತದ ಪರ ಗರಿಷ್ಠ ಸ್ಕೋರ್ ದಾಖಲಿಸಿರುವ ಕೀರ್ತಿಯನ್ನು ರೋಹಿತ್ ಹೊಂದಿದ್ದಾರೆ. ಅಲ್ಲದೆ ಅತ್ಯಧಿಕ ಸಿಕ್ಸರ್ ಭಾರಿಸಿದ ದಾಖಲೆಯನ್ನು ರೋಹಿತ್ ಹೊಂದಿದ್ದಾರೆ.
ರೋಹಿತ್ ನಿಜಕ್ಕೂ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್. ಆದರೆ, ಟೆಸ್ಟ್ ಕ್ರಿಕೆಟ್ಗೆ ಹೋಲಿಸಿದರೆ ಅವರ ಪ್ರದರ್ಶನ ತೀರಾ ಕಳಪೆಯಾಗಿದೆ. ರೋಹಿತ್ ಶರ್ಮಾಗೆ ರಾಹುಲ್ ದ್ರಾವಿಡ್ ಅಥವಾ ಸಚಿನ್ ತೆಂಡೂಲ್ಕರ್ ಅಂತಹವರು ಕೆಲವು ತಿಂಗಳು ಮಾರ್ಗದರ್ಶಕರಾದರೆ ರೋಹಿತ್ ನಿಜಕ್ಕೂ ಟೆಸ್ಟ್ನಲ್ಲೂ ತಮ್ಮ ಪ್ರತಿಭೆ ಹೊರಹಾಕಿಲಿದ್ದಾರೆ ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.