ನವದೆಹಲಿ, ಜು 22 (DaijiworldNews/SM): ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇನಾ ಬೆಟಾಲಿಯನ್ ಸೇರಲಿದ್ದು, ಅವರ ತರಬೇತಿಗೆ ಸಮ್ಮಿತಿ ಸಿಕ್ಕಿದೆ. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅನುಮತಿ ಕೊಟ್ಟಿದ್ದಾರೆ.
ಮುಂದಿನ ಎರಡು ತಿಂಗಳ ಕಾಲ ಮಹೇಂದ್ರ ಸಿಂಗ್ ಧೋನಿ ಧುಮುಕುಕೊಡೆ ರೆಜಿಮೆಂಟ್ನ ಪ್ರಾದೇಶಿಕ ಸೇನಾ ಬೆಟಾಲಿಯನ್ ನಲ್ಲಿ ತರಬೇತಿ ಪಡೆಯಲಿದ್ದಾರೆ. ಸೇನೆಯ ಲೆಫ್ಟಿನೆಂಟ್ ಕರ್ನಲ್ ಗೌರವವನ್ನು ಧೋನಿ ಹೊಂದಿದ್ದು, ಒಂದು ಭಾಗದ ತರಬೇತಿಯನ್ನು ಧೋನಿ ಕಾಶ್ಮೀರ ಕಣಿವೆ ಭಾಗದಲ್ಲಿ ಪಡೆಯಲಿದ್ದಾರೆ. ಆದರೆ ಬಳಿಕ ಅವರು ಸೇನೆಯಲ್ಲಿ ಸೇವೆ ಸಲ್ಲಿಸುವುದರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದರಿಂದ, ಬಹುತೇಕ ಅನುಮಾನ ಎನ್ನಲಾಗಿದೆ.
2011 ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಪಡೆದಿದ್ದ ಧೋನಿ ಪ್ರಾದೇಶಿಕ ಸೈನ್ಯದ 106 ಕಾಲಾಳುಪಡೆ ಬೆಟಾಲಿಯನ್ಗೆ ಸೇರಿದವರು. ಧೋನಿ ಸೇನಾ ತರಬೇತಿಯಲ್ಲಿರುವುದರಿಂದ ಮುಂದಿನ ೨ ತಿಂಗಳ ಕಾಲ ಧೋನಿ ಟೀಂ ಇಂಡಿಯಾ ಪರ ಆಡಲು ಅಲಭ್ಯರಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಧೋನಿ ಹೊರಗುಳಿಯಲಿದ್ದಾರೆ. ಧೋನಿಯವರ ಬದಲಿಗೆ ರಿಷಬ್ ಪಂತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.