ಮ್ಯಾಂಚೆಸ್ಟರ್, ಜು 10 (DaijiworldNews/SM): ವಿಶ್ವಕಪ್ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಟೀಂ ಇಂಡಿಯಾ ಸೆಮಿಫನಲ್ ನಲ್ಲಿ ಮುಗ್ಗರಿಸಿದ್ದು, ಸೋತು ಸುಣ್ಣಾಗಿದೆ.
ಮಳೆಯ ಅಡ್ಡಿಯ ನಡುವೆಯೂ ನಡೆದ ಪಂದ್ಯದಲ್ಲಿ ಜಡೆಜಾ ಹಾಗೂ ಮಹೇಂದ್ರ ಸಿಂಗ್ ಧೋನಿಯವರ ಹೋರಾಟದ ಮಧ್ಯೆಯೂ ನ್ಯೂಜಿಲ್ಯಾಂಡ್ ವಿರುದ್ಧ 18 ರನ್ ಗಳ ಹೀನಾಯ ಸೋಲು ಕಂಡಿದ್ದು, ವಿಶ್ವಕಪ್ ನಿಂದ ಹೊರಬಿದ್ದಿದೆ.
ಆರಂಭಿಕರ ವೈಫಲ್ಯ:
ಇಂದು ಪಂದ್ಯ ಆರಂಭಗೊಳ್ಳುತ್ತಿದ್ದಂತೆ ಟೀಂ ಇಂಡಿಯಾದ ಆರಂಭಿಕ ಬಂದಂತೆ ಫೆವೀಲಿಯನ್ ನತ್ತ ಹೆಜ್ಜೆ ಹಾಕಿದರು. ಸರಣಿಯುದ್ದಕ್ಕೂ ಅಬ್ಬರಿಸಿ ಅತಿಯಾದ ಆತ್ಮ ವಿಶ್ವಾಸ ಹೊಂದಿದ್ದ ರೋಹಿತ್ ಶರ್ಮ 1 ರನ್ ಗಳಿಸಲಷ್ಟೇ ಶಕ್ತವಾದರೆ, ಕೆ.ಎಲ್. ರಾಹುಲ್ ಕೂಡ ರೋಹಿತ್ ರನ್ನೇ ಅನುಸರಿಸಿ ಫೆವೀಲಿಯನ್ ನತ್ತ ಹೆಜ್ಜೆ ಹಾಕಿದರು. ಇನ್ನು ನಾಯಕ ವಿರಾಟ್ ಕೊಹ್ಲಿ ವಿರಾಟ ರೂಪ ಪ್ರದರ್ಶಿಸಲು ವಿಫಲರಾದರು. ತಾನೇಕೆ ಹೆಚ್ಚು ರನ್ ಪೇರಿಸಲಿ ಎಂದ ಅವರೂ ಕೂಡ ಆರಂಭಿಕರ ಹಾದಿಯಲ್ಲೇ ನಡೆದರು. ಬಳಿಕ ರಿಷಬ್ ಪಂಥ್ 24 ರನ್ ಗಳ ಕಾಣಿಕೆ ನೀಡಿದರು. ದಿನೇಶ್ ಕಾರ್ತಿಕ್ ಮತ್ತೊಮ್ಮೆ ನಿರೀಕ್ಷೆಯ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೇವಲ 6 ರನ್ ಗಳಿಗೆ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ 32 ರನ್ ಕೊಡುಗೆ ನೀಡಿದರೆ, ಬಹು ನಿರೀಕ್ಷೆಯನ್ನು ಹೊಂದಿದ್ದ ರವೀಂದ್ರ ಜಡೇಜಾ 77 ರನ್ ಗಳಿಸಿದ್ದ ಸಂದರ್ಭ ಬೋಲ್ಟ್ ಎಸೆತದಲ್ಲಿ ವಿಲಿಯಂಸನ್ ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ಬಳಿಕ ಧೋನಿ ಟೀಂ ಇಂಡಿಯಾವನ್ನು ದಡ ಸೇರಿಸುವರು ಎಂದು ನಿರೀಕ್ಷೆ ಹೊಂದಲಾಗಿತ್ತು. ಆದರೆ, ಅಲ್ಲೂ ಕೂಡ ನಿರೀಕ್ಷೆ ಹುಸಿಯಾಯಿತು. 50 ರನ್ ಗಳಿಸಿದ್ದ ಸಂದರ್ಭ ರನ್ ಔಟ್ ಆಗಿ ಪಂದ್ಯ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು.
ಅಂತಿಮವಾಗಿ 49.3 ಓವರ್ ಗಳಲ್ಲಿ 221 ರನ್ ಗಳಿಗೆ ಟೀಂ ಇಂಡಿಯಾ ಸರ್ವ ಪತನ ಕಂಡಿತು. ನ್ಯೂಜಿಲ್ಯಾಂಡ್ ತಂಡದ ಶಿಸ್ತಿನ ದಾಳಿಯ ಎದುರು ಭಾರತೀಯರ ಆಟ ನಡೆಯಲಿಲ್ಲ.
https://www.daijiworld.com/kannada/newsDisplay.aspx?newsID=11592&newsCategory=sports