ಮ್ಯಾಂಚೆಸ್ಟರ್, ಜೂ 27 (Daijiworld News/SM): ಕಡಿಮೆ ಪಂದ್ಯದಲ್ಲಿ 11 ಸಾವಿರ ರನ್ ಪೂರೈಸಿದ ದಾಖಲೆಯನ್ನು ದಾಖಲಿಸಿದ್ದ ವಿರಾಟ್ ಕೊಹ್ಲಿ ಇದೀಗ ತನ್ನ ಹೆಸರಿಗೆ ಮತ್ತೊಂದು ಹೊಸ ದಾಖಲೆಯನ್ನು ಬರೆದುಕೊಂಡಿದ್ದಾರೆ.
ಕಡಿಮೆ ಪಂದ್ಯದಲ್ಲಿ 20 ಸಾವಿರ ರನ್ ಪೂರೈಸಿದ ದಾಖಲೆಯನ್ನು ವಿರಾಟ್ ಬರೆದಿದ್ದಾರೆ. 417 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಗಳ ಮೂಲಕ ಕೊಹ್ಲಿ 20 ಸಾವಿರ ರನ್ ಗಳನ್ನು ಪೂರೈಸಿದ್ದು, ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಜೂನ್ 22ರಂದು ಅಫ್ಘಾನಿಸ್ತಾನದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಒದೊಮ್ಮೆ 104 ಪ್ಲಸ್ ರನ್ ಗಳನ್ನು ಸಿಡಿಸಿದ್ದೇ ಆದಲ್ಲಿ, ವೇಗದ 20 ಸಾವಿರ ರನ್ ಗಳ ಗಡಿ ದಾಟಿದ ಭಾರತೀಯ ಆಟಗಾರ ಎನಿಸಲಿದ್ದಾರೆ. ವಿಶ್ವಕಪ್ ಕ್ರಿಕೆಟ್ ನಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ವಿಂಡೀಸ್ನ ಕಾಟ್ರಲ್ ಎಸೆದ 25ನೇ ಓವರ್ನ 4ನೇ ಎಸೆತದಲ್ಲಿ ಸಿಂಗಲ್ ರನ್ ತೆಗೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ 20 ಸಾವಿರ ರನ್ ಗಡಿದಾಟಿದ ಆಟಗಾರ ಎನಿಸಿದರು.
ಅಲ್ಲದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿದು ಕೊಹ್ಲಿ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದಾರೆ. ಈ ಹಿಂದೆ ಕಡಿಮೆ ಪಂದ್ಯದಲ್ಲಿ ಈ ದಾಖಲೆ ಮಾಡಿರುವ ಹೆಗ್ಗಳಿಕೆ ಸಚಿನ್ ಹಾಗೂ ಲಾರಾ ಹೆಸರಿನಲ್ಲಿತ್ತು. 20,000 ರನ್ ಗೆರೆ ದಾಟಲು ಕ್ರಿಕೆಟ್ ದಿಗ್ಗಜರಾದ ಸಚಿನ್ ಮತ್ತು ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಇಬ್ಬರೂ ತಲಾ 453 ಇನ್ನಿಂಗ್ಸ್ಗಳನ್ನು ಬಳಿಸಿಕೊಂಡಿದ್ದರು. ಆದರೆ ಕೊಹ್ಲಿ ಸದ್ಯ 417 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.