ಮುಂಬೈ, ಮಾ.24 (DaijiworldNews/AA): ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈನ ವಿಘ್ನೇಶ್ ಪುತ್ತೂರು ಅವರು 3 ವಿಕೆಟ್ ಉರುಳಿಸಿ ಮೋಡಿ ಮಾಡಿದ್ದಾರೆ.

ತನ್ನ ಚೊಚ್ಚಲ ಪಂದ್ಯದಲ್ಲೇ ವಿಘ್ನೇಶ್ ಪುತ್ತೂರು ಮಣಿಕಟ್ಟಿನಲ್ಲೇ ಸ್ಪಿನ್ ಮೋಡಿ ಮಾಡಿದ್ದಾರೆ. ಅನುಭವಿ ಆಟಗಾರರಾದ ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಹಾಗೂ ದೀಪಕ್ ಹೂಡಾ ಅವರ ವಿಕೆಟ್ ಉರುಳಿಸಿ ಕಮಾಲ್ ಮಾಡಿದ್ದಾರೆ.
24 ವರ್ಷದ ವಿಘ್ನೇಶ್ ಪುತ್ತೂರು ಅವರು ಮೂಲತಃ ಕೇರಳದವರು. ಇವರ ಹೆಸರಿನಲ್ಲಿರುವ ಪತ್ತೂರಿಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಬದಲಾಗಿ ಅವರು ಕೇರಳದಲ್ಲಿರುವ ಪುತ್ತೂರಿನವರು.
ವಿಶೇಷವೆಂದರೆ ವಿಘ್ನೇಶ್ ಪುತ್ತೂರು ಅವರು ಈವರೆಗೆ ಒಂದು ಒಂದು ದೇಶೀಯ ಪಂದ್ಯವಾಡಿಲ್ಲ. ಅಂದರೆ ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಆದರೆ ಅವರು ಕಳೆದ ಬಾರಿಯ ಕೇರಳ ಕ್ರಿಕೆಟ್ ಲೀಗ್ನಲ್ಲಿ ಆಡಿದ್ದರು. ಈ ವೇಳೆ ವಿಘ್ನೇಶ್ ಅವರ ವೃಸ್ಟ್ ಸ್ಪಿನ್ ಸಾಮರ್ಥ್ಯವನ್ನು ಗಮನಿಸಿದ ಮುಂಬೈ ಇಂಡಿಯನ್ಸ್ನ ಪ್ರತಿಭಾ ಅನ್ವೇಷಣಾ ತಂಡವು ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವಂತೆ ಅವರಿಗೆ ಸೂಚಿಸಿದ್ದರು.
ಅದರಂತೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ವಿಘ್ನೇಶ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 30 ಲಕ್ಷ ರೂ.ಗೆ ಖರೀದಿಸಿತು. ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಗರಡಿಯಲ್ಲಿ ಪಳಗಿದ ವಿಘ್ನೇಶ್ ಅವರನ್ನು, ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ಕಣಕ್ಕಿಳಿಸಲು ಮುಂಬೈ ಇಂಡಿಯನ್ಸ್ ತಂಡ ನಿರ್ಧರಿಸಿತು. ಅದರಂತೆ ಐಪಿಎಲ್ ನ ತಮ್ಮ ಮೊದಲ ಪಂದದಲ್ಲೇ 3 ವಿಕೆಟ್ ಕಬಳಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ.