ಮುಂಬೈ,ಮಾ.13 (DaijiworldNews/AK): ಐಸಿಸಿ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ಕೆಎಲ್ ರಾಹುಲ್ ಮುಂಬರುವ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.


ಈ ಬಾರಿಯ ಟೂರ್ನಿಯ ಮೊದಲಾರ್ಧದ ಕೆಲ ಪಂದ್ಯಗಳಿಂದ ರಾಹುಲ್ ಹೊರಗುಳಿಯಲಿದ್ದು, ಏಪ್ರಿಲ್ ಮಧ್ಯ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ದಂಪತಿ ಮೊದಲ ಮಗುವಿನ ನಿರೀಕ್ದೆಯಲ್ಲಿರುವುದು. ವೈದ್ಯರು ಮುಂದಿನ ತಿಂಗಳು ಡೆಲಿವರಿ ಡೇಟ್ ನೀಡಿದ್ದಾರೆ. ಹೀಗಾಗಿ ಏಪ್ರಿಲ್ನಲ್ಲಿ ಕೆಎಲ್ ರಾಹುಲ್ ಕುಟುಂಬ ಹೊಸ ಅತಿಥಿಯ ಆಗಮನವಾಗಲ್ಲಿದೆ.
ಇತ್ತ ಪತ್ನಿಯೊಂದಿಗೆ ಸಮಯ ಕಳೆಯುವ ಉದ್ದೇಶದಿಂದಾಗಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಮೂರು-ನಾಲ್ಕು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರು ಏಪ್ರಿಲ್ ಮಧ್ಯ ಭಾಗದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.